ಮೃತ ಕುಟುಂಬಗಳಿಗೆ 1 ಕೋಟಿ ರೂ. ಪರಿಹಾರ ನೀಡಲಿ

ಸಂಪಗಿ
Published on

ಬೇತಮಂಗಲ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಬಂದಾಗಿನಿಂದ ಜವಾಬ್ದಾರಿ ಇಲ್ಲದೆ ಆಡಳಿತ ನಡೆಸುತ್ತಿದ್ದು. ಅವೈಜ್ಞಾನಿಕ ರೀತಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿರುವ ಹಿನ್ನೆಲೆಯಲ್ಲಿ ವಿಜಯೋತ್ಸವ ಬದಲು ಮರಣೊತ್ಸವ ಮಾಡಿದ್ದಾರೆ ಎಂದು ಮಾಜಿ ಶಾಸಕ ವೈ. ಸಂಪಂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಡಮಕನಹಳ್ಳಿಯ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲ್ತುಳಿತ ದುರ್ಟನೆಯಲ್ಲಿ ಮೃತಪಟ್ಟಿರುವ ಕುಟುಂಬಗಳಿಗೆ ತಲಾ ಒಂದು ಕೋಟಿ ಪರಿಹಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.

ಆರ್​ಸಿಬಿ ತಂಡ ಕಪ್​ ಗೆದ್ದು ಬಂದಿರುವುದಕ್ಕೆ ನಮಗೂ ಸಂತೋಷ. ಆದರೆ ಅವರನ್ನು ಅಭಿನಂದಿಸುವುದಾಗಿ ಹೇಳಿ ಕಾರ್ಯಕ್ರಮ ಮಾಡಲಾಗಿದೆ. ವಿಧಾನಸೌಧ ಮೆಟ್ಟಿಲು ಮೇಲೆ ನಡೆಸಿದ ಕಾರ್ಯಕ್ರಮ ಸನ್ಮಾನ ಅನ್ನುವುದಕ್ಕಿಂತ ಅದು ಅವಮಾನ ಮಾಡಿದ ರೀತಿಯಲ್ಲಿತ್ತು. ಸರ್ಕಾರದ ಕಾರ್ಯಕ್ರಮದ ಬದಲು ಕಾಂಗ್ರೆಸ್​ ಕಾರ್ಯಕ್ರಮ ಆಗಿತ್ತು. ರಾಜಕಾರಣಿಗಳು ಮತ್ತು ಅವರ ಕುಟುಂಬಗಳಿಗೆ ಬೇಕಾದ ರೀತಿಯಲ್ಲಿ ನಡೆಸಲಾಯಿತು ಎಂದು ಟೀಕಿಸಿದರು.

ವಿಧಾನ ಸೌಧ ಬಳಿಯೇ ಲಕ್ಷಾಂತರ ಮಂದಿ ಜಮಾಯಿಸಿದ್ದರು, ಅವ್ಯವಸ್ಥೆ ಆಗಿತ್ತು. ಆ ಕಾರ್ಯಕ್ರಮವೇ ಅಸ್ತವ್ಯಸ್ತ ಆದಮೇಲೆ ಅಲ್ಲಿಯೇ ಬುದ್ದಿ ಕಲಿಯದ ಸರ್ಕಾರ ಕಂಠೀರವ ಕ್ರೀಡಾಂಗಣದಲ್ಲಿ ಮತ್ತೊಮ್ಮೆ ಅವೈಜ್ಞಾನಿಕ ಮತ್ತು ಬೇಜವಾಬ್ದಾರಿ ವ್ಯವಸ್ಥೆಯಿಂದಾಗಿ ಹನ್ನೊಂದು ಮಂದಿ ಪ್ರಾಣ ತೆಗೆದು ಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಾಂತರ ಅಧ್ಯಕ್ಷ ಲಕ್ಷ್ಮೀ ನಾರಾಯಣ್​ ಶಮಾರ್, ಬಾಲಕೃಷ್ಣ, ತಾಪಂ ಮಾಜಿ ಸದಸ್ಯ ಡಾ.ಕೃಷ್ಣ್ಣಮೂರ್ತಿ, ಟಿಎಪಿಎಂಸಿ ನಿರ್ದೇಶಕರಾದ ಕೃಷ್ಣಮೂರ್ತಿ, ಪುರುಷೋತ್ತಮ್​, ಮುಖಂಡರಾದ ಬದಾಮಕನಹಳ್ಳಿ ವೆಂಕಟೇಶ್​, ಶ್ರೀರಾಮಪ್ಪ, ಮುನಿಯಪ್ಪ, ನಾರಾಯಣಸ್ವಾಮಿ, ವೆಂಕಟೇಶಪ್ಪ, ಶ್ರೀನಿವಾಸ್​ ಚಲಪತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net