

ಮೈಸೂರು: ಜಮೀನು ಕೊಡಿಸುವುದಾಗಿ ನಂಬಿಸಿ ಬಿಲ್ಡರ್ ಒಬ್ಬರಿಗೆ 1.69 ಕೋಟಿ ರೂ. ವಂಚಿಸಲಾಗಿದೆ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಬಿಲ್ಡರ್ ಎಲ್.ಅರುಣ್ ಕುಮಾರ್ ನೀಡಿದ ದೂರಿನ ಮೇರೆಗೆ ಸಾರಿಕಾ ಎಂ.ಶೆಟ್ಟಿ, ಸಂಜೀವ ಶೆಟ್ಟಿ, ವರದನಾಯಕ, ಚೌಡಮ್ಮ, ಹುಚ್ಚಯ್ಯ, ಚಿಕ್ಕಮ್ಮ, ಮಂಜಯ್ಯ, ಲಕ್ಷ್ಮೀ ಎಂಬವರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ತಾಲೂಕಿನ ಉದ್ಬೂರು ವ್ಯಾಪ್ತಿಯಲ್ಲಿ ಅರುಣ್ ಕುಮಾರ್ ಬಡಾವಣೆ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದರು. ಈ ಸಂದರ್ಭ ಪರಿಚಯವಾದ ಸಂಜೀವ ಶೆಟ್ಟಿ ಮತ್ತು ಸಾರಿಕಾ ಕಡಿಮೆ ಬೆಲೆ ಜಮೀನು ಕೊಡಿಸುವುದಾಗಿ ನಂಬಿಸಿ ಹನ ಪಡೆದಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.