

ಕೋಲಾರ: ಕೋಲಾರ ನಗರಸಭೆಯ 2025-26ನೇ ಸಾಲಿನ ಬಜೆಟ್ ಸಭೆಯಲ್ಲಿ ಅಧ್ಯೆ ಲಕ್ಷ್ಮೀದೇವಮ್ಮ ಅವರು 130,00,67,726 ರೂ. ಆದಾಯ ನಿರೀೆಯ ಬಜೆಟ್ ಮಂಡಿಸಿದರು.
ಗುರುವಾರ ಕೋರಂ ಕೊರತೆಯಿಂದಾಗಿ ಶನಿವಾರಕ್ಕೆ ಮುಂದೂಡಿಕೆಯಾಗಿದ್ದ ಬಜೆಟ್ ಸಭೆಗೆ ಕೋರಂ ಮೀರಿ ಸದಸ್ಯರು ಆಗಮಿಸಿದ್ದ ಹಿನ್ನೆಲೆಯಲ್ಲಿ, ಗೊಂದಲವಿಲ್ಲದೆ ಬಜೆಟ್ ಮಂಡನೆ ಮಾಡಲಾಯಿತು. ಒಟ್ಟು ಬಜೆಟ್ ಪೈಕಿ 128,53,70,000 ರೂ. ಖರ್ಚು ಆಗಿ 1,46,97,726 ಕೋಟಿ ರೂ. ಉಳಿತಾಯವಾಗಲಿದೆ ಎಂದು ಅಧ್ಯೆ ಪ್ರಕಟಿಸಿದರು.
ನಗರಸಭೆ ನಿಧಿಯಿಂದ ನಿರೀಕ್ಷಿಸಿರುವ ಆದಾಯವು ಆಸ್ತಿ ತೆರಿಗೆ 9,98,40,000 ರೂ., ಜಾಹಿರಾತು ತೆರಿಗೆ 8.5 ಲಕ್ಷ ರೂ., ನೀರಿನ ಬಳಕೆದಾರರ ಫೀ 1.5 ಕೋಟಿ ರೂ., ಒಳಚರಂಡಿ ಬಳಕೆದಾರರ ಮತ್ತು ಸಂಪರ್ಕ 32 ಲಕ್ಷ ರೂ., ಘನತ್ಯಾಜ್ಯ ನಿರ್ವಹಣೆ ದರ 90 ಲಕ್ಷ ರೂ., ಮಳಿಗೆ ಬಾಡಿಗೆಯಿಂದ 66,10,000ರೂ, ಅಭಿವೃದ್ಧಿ ಕರದಿಂದ 10 ಲಕ್ಷ ರೂ., ಕಟ್ಟಡ ಪರವಾನಗಿ ಶುಲ್ಕದಿಂದ 65 ಲಕ್ಷ ರೂ., ಮಾರುಕಟ್ಟೆ, ಪ್ರಯಾಣಿಕರ ತಂಗುದಾಣ ಮತ್ತು ಸಂತೆ ಶುಲ್ಕದಿಂದ 20,00,000ರೂ, ಪರವಾನಗಿ ದರದಿಂದ 55 ಲಕ್ಷ ರೂ., ಇತರೆ ವಸೂಲಿಯಿಂದ 5,01,05,000ರೂ ಸೇರಿ ಒಟ್ಟು 19.51 ಕೋಟಿ ಆದಾಯ
ನಿರೀಸಲಾಗಿದೆ ಎಂದು ತಿಳಿಸಿದರು.
ನಗರ ನೈರ್ಮಲೀಕರಣಕ್ಕೆ 3.90 ಕೋಟಿ ರೂ., ರಸ್ತೆ ದುರಸ್ತಿ ಹಾಗೂ ರಸ್ತೆ ಮೆಟಿಲಿಂಗ್ಗೆ 40 ಲಕ್ಷ ರೂ., ಬೀದಿ ದೀಪದ ವಿದ್ಯುತ್ ಬಿಲ್ ಪಾವತಿಗೆ 6,69 ಕೋಟಿ ರೂ., ಬೀದಿ ದೀಪ ನಿರ್ವಹಣೆಗೆ 20 ಲಕ್ಷ ರೂ., ಪೈಪ್ಲೈನ್ ಮತ್ತು ಪಂಪು ಮೋಟರ್ ದುರಸ್ತಿಗೆ 5.5 ಕೋಟಿ ರೂ., ನೀರು ಸರಬರಾಜು ವಿದ್ಯುತ್ ಬಿಲ್ 14.35 ಕೋಟಿ ರೂ., ಘನತ್ಯಾಜ್ಯ ವಸ್ತುಗಳ ಸಲಕರಣೆಗಳ ಖರೀದಿ ಮತ್ತು ಇತರ ಖರ್ಚು 15 ಲಕ್ಷ ರೂ., ಜಮೀನು ಖರೀದಿ <10 ಕೋಟಿ, ಕಟ್ಟಡ ನಿಮಾರ್ಣಕ್ಕೆ 9,50,00,000ರೂ., ವಾಹನ ಖರೀದಿಗೆ 30 ಲಕ್ಷ ರೂ., ಹೊಸ ರಸ್ತೆ ನಿಮಾರ್ಣ 5 ಕೋಟಿ ರೂ., ಚರಂಡಿ ನಿಮಾರ್ಣಕ್ಕೆ 4 ಕೋಟಿ ರೂ., ಬೀದಿದೀಪ ಖರೀದಿಗೆ 10 ಲಕ್ಷ ರೂ.,
ವೇತನ ಪಾವತಿ 9.5 ಕೋಟಿ ರೂ, ಹೊಸ ಬೋರ್ವೆಲ್ ಕೊರೆಯುವುದಕ್ಕೆ 1.5 ಕೋಟಿ ರೂ., ಹೊಸ ಪಂಪ್ಸೆಟ್ ಖರೀದಿಗೆ <2.5 ಕೋಟಿ, ಹೊಸ ಪೈಪ್ಲೈನ್ಗೆ 2.25 ಕೋಟಿ ರೂ., ಒಳಚರಂಡಿ ಸಂಪರ್ಕ 70 ಲಕ್ಷ ರೂ., ಪಾರ್ಕ್ ಅಭಿವೃದ್ಧಿ ಮತ್ತು ಅರಣ್ಯೀಕರಣಕ್ಕೆ 2.5 ಕೋಟಿ ರೂ., ಮಾರುಕಟ್ಟೆ ನಿಮಾರ್ಣ 1 ಕೋಟಿ ರೂ., ಇತರೆ ವೆಚ್ಚಗಳು 13,46,60,000 ರೂ., ಇತರೆ ಬಂಡವಾಳ ವೆಚ್ಚಗಳಿಗೆ 20.54 ಕೋಟಿ ರೂ., ಗೃಹಭಾಗ್ಯ ಯೋಜನೆ 2.5 ಕೋಟಿ ರೂ., ಅಸಾಮಾನ್ಯ ಸಾಲ ಮತ್ತು ಅಮಾನತ ಖಾತೆ 10,64,10,000 ರೂ., ಶೇ.24.10, ಶೇ.7.25, ಶೇ.5, ಶೇ.1ರ ಅಭಿವೃದ್ಧಿಗಾಗಿ <1.35 ಕೋಟಿ ಸೇರಿ ಒಟ್ಟು 128,53,70,000 ರೂ. ವ್ಯಯ ಆಗಲಿದೆ ಎಂದು ಅಧ್ಯಕ್ಷೆ ಲಕ್ಷಿ$್ಮದೇವಮ್ಮ ವಿವರಿಸಿದರು. ಎಲ್ಲ ಸದಸ್ಯರು ಆಯವ್ಯಯಕ್ಕೆ ಸಮ್ಮತಿ ಸೂಚಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಸಂಗೀತಾ ಜಗದೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಖಾನ್ ಹಾಜರಿದ್ದರು.
1.30 ಕೋಟಿ ರೂ. ಆದಾಯ ನಿರೀಕ್ಷೆ : ಎಸ್ಎಫ್ಸಿ ಅನುದಾನ ಮತ್ತು ರಾಜ್ಯ ಹಣಕಾಸು ಆಯೋಗದ ಅನುದಾನ 91 ಲಕ್ಷ ರೂ., ವೇತನ ಅನುದಾನ 7,73,00,000 ರೂ., ವಿದ್ಯುತ್ ಶಕ್ತಿ ಅನುದಾನ 21.04 ಕೋಟಿ ರೂ., ಸ್ಥಳಿಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ ಅನುದಾನ 20,00,000 ರೂ., ನಲ್ಮ್-ಎಂಆರ್ಎಫ್ ಸ್ವಚ್ಛ ಭಾರತ್ ಮಿಷನ್ ಅನುದಾನ 7.56 ಕೋಟಿ ರೂ., ಎಸ್ಎಫ್ಸಿ ಬರ ಪರಿಹಾರ ಅನುದಾನ 25 ಕೋಟಿ ರೂ., 15ನೇ ಹಣಕಾಸು ಯೋಜನೆಯ ಅನುದಾನ 6,14,00,000 ರೂ., ಅಮೃತ್ ಯೋಜನೆ ಅನುದಾನ 8 ಕೋಟಿ ರೂ. ಜಿಲ್ಲಾಧಿಕಾರಿಗಳ ಸಿಆರ್ಎಫ್ ಅನುದಾನ 70 ಲಕ್ಷ ರೂ., ಗೃಹಭಾಗ್ಯ ಯೋಜನೆಯ 12.50 ಕೋಟಿ ರೂ., ಎಸ್ಎಫ್ಸಿ ವಿಶೇಷ ಅನುದಾನ 20.5 ಕೋಟಿ ರೂ., ಬಂಡವಾಳ ಆದಾಯ 4 ಕೋಟಿ ರೂ., ಶೇ.24.10, ಶೇ.7.25, ಶೇ.5, ಶೇ.1 ಅಭಿವೃದ್ಧಿಗಾಗಿ 90 ಲಕ್ಷ ರೂ., ಅಸಾಮಾನ್ಯ ಸಾಲ ಮತ್ತು ಅಮಾನತ ಖಾತೆ 6,49,10,000ರೂ, ಜನಗಣತಿ ಅನುದಾನ 20 ಕ್ಷ ರೂ.ರೂ., ಪ್ರಾರಂಭಿಕ ಶಿಲ್ಕು 13,37,11,726ರೂ ಸೇರಿದಂತೆ ಒಟ್ಟು 1,30,00,67,726ರೂ ಆದಾಯ ನಿರೀಕ್ಷಿಸಲಾಗಿದೆ ಎಂದು
ಲಕ್ಷಿ$್ಮದೇವಮ್ಮ ಹೇಳಿದರು.
ಜಾಹೀರಾತು ತೆರಿಗೆ ಸೋರಿಕೆ : ನಗರಸಭೆ ವ್ಯಾಪ್ತಿಯಲ್ಲಿ ಜಾಹೀರಾತು ಫಲಕಗಳು ಹೆಚ್ಚಾಗಿವೆ. ಅವುಗಳಿಂದ 8.16 ವಾರ್ಷಿಕ ಲಕ್ಷರೂ ತೆರಿಗೆ ಎಂದು ಹೇಳಿದ್ದರೂ 3 ಲಕ್ಷ ರೂ. ಮಾತ್ರವೇ ಸಂಗ್ರಹವಾಗುತ್ತಿದೆ. ಉಳಿದ ಹಣ ಏನಾಗುತ್ತಿದೆ, ಎಷ್ಟು ಫಲಕಗಳಿವೆ ಎನ್ನುವ ಮಾಹಿತಿ ನಿಮಗಿಲ್ಲವೇ? ಒಂದೆರೆಡು ದಿನ ಓಡಾಡಿ ನಾನೇ ಸರ್ವೇ ಮಾಡಿ ಲೆಕ್ಕ ಕೊಡುತ್ತೇನೆ ಎಂದು ಸದಸ್ಯ ಎನ್.ಎಸ್.ಪ್ರವಿಣ್ ಗೌಡ ಕಿಡಿಕಾರಿದರು. ಆಗ ಅಧಿಕಾರಿಗಳು ನಾವೇ ಕೆಲಸ ಮಾಡಿ ಲೆಕ್ಕ ಹೇಳುವುದಾಗಿ ತಿಳಿಸಿದರು. ನಗರಸಭೆಗೆ ಸೇರಿದ ಸಾಕಷ್ಟು ಜಾಗಗಳು ನಗರದಲ್ಲಿವೆ ಅಲ್ಲಿ ಮಳಿಗೆಗಳನ್ನು ನಿರ್ಮಾಣ ಮಾಡಿದ್ದರೆ ಸುಲಭವಾಗಿ ಆದಾಯ ಬರುತ್ತದೆಯಲ್ಲವೇ ಎಂದು ಪ್ರಶ್ನಿಸಿರು. ಇದಕ್ಕೆ ಉತ್ತರಿಸಿದ ಪೌರಾಯುಕ್ತ ಪ್ರಸಾದ್ ರೆಡ್ಡಿ, ಈ ವಿಚಾರವನ್ನು ಮುಂದಿನ ಸಭೆಯಲ್ಲಿ ವಿಷಯವಿಟ್ಟು ಚರ್ಚಿಸುವುದಾಗಿ ತಿಳಿಸಿದರು.