ಫೇಸ್‌ಬುಕ್ ಸ್ನೇಹದಿಂದ 1.44 ಲಕ್ಷ ರೂ. ಪಂಗನಾಮ

cyber crime
Published on

ಶಿವಮೊಗ್ಗ: ಮಹಿಳೆಯೊಬ್ಬರಿಂದ ಫೇಸ್‌ಬುಕ್‌ನಲ್ಲಿ ಬಂದಿದ್ದ ಫ್ರೆಂಡ್ ರಿಕ್ಷೆಸ್ಟ್‌ಗೆ ಒಪ್ಪಿದ ಉದ್ಯಮಿಯೊಬ್ಬರು ಲಾಭದ ಆಸೆಗೆ ಹೂಡಿಕೆ ಮಾಡಿ 1.44 ಲಕ್ಷ ರೂ. ಕಳೆದುಕೊಂಡಿದ್ದು, ಇದೀಗ ಸಿಇಎನ್ ಠಾಣೆ ಮೆಟ್ಟಿಲೇರಿದ್ದಾರೆ.

ಫೇಸ್‌ಬುಕ್‌ನಲ್ಲಿ ಸ್ನೇಹ ಉಂಟಾದ ಬಳಿಕ ಮಹಿಳೆಯೊಂದಿಗೆ ಉದ್ಯಮಿಯ ಚಾಟಿಂಗ್ ಮುಂದುವರಿದಿದೆ. ಆಕೆ ನಾನು ಮುಂಬಯಿಯಲ್ಲಿ ಹಣ ಹೂಡಿಕೆ ಮಾಡುತ್ತಿದ್ದು, ನೀವು ಹೂಡಿಕೆ ಮಾಡಿ ಎಂದು ಉದ್ಯಮಿಗೆ ಹೇಳಿದ್ದಾಳೆ. ಜತೆಗೆ ಹಣ ಕಳಿಸಲು ವಾಟ್ಸಪ್‌ನಲ್ಲಿ ಲಿಂಕ್‌ವೊಂದನ್ನು ಕಳಿಸಿದ್ದಳು. ಆ ಲಿಂಕ್ ಮೂಲಕ ಈ ವ್ಯಕ್ತಿ 50 ಸಾವಿರ ರೂ. ಹೂಡಿಕೆ ಮಾಡಿದ್ದರು. ಬಳಿಕ ಅವರ ಖಾತೆಗೆ ಲಾಭಾಂಶವನ್ನೂ ಕಳಿಸಲಾಗಿತ್ತು.

ಇದನ್ನು ನಂಬಿದ ಉದ್ಯಮಿ ಮಹಿಳೆ ತಿಳಿಸಿದ ಬ್ಯಾಂಕ್ ಖಾತೆ, ಯುಪಿಐ ಐಡಿಗಳಿಗೆ ತನ್ನ ಮಗ ಹಾಗೂ ಸ್ನೇಹಿತರ ಬ್ಯಾಂಕ್ ಖಾತೆಯಿಂದ 1,44,800 ರೂ. ಕಳಿಸಿದ್ದಾರೆ. ಇದಾದ ವಾರದ ಬಳಿಕ ಅವರ ಖಾತೆಗಳಿಂದ ಹಣ ವಿತ್‌ಡ್ರಾ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಆ ವೇಳೆ ಸಂಬಂಧಪಟ್ಟವರನ್ನು ಉದ್ಯಮಿ ಸಂಪರ್ಕಿಸಿದಾಗ ತೆರಿಗೆ ಪಾವತಿಸಬೇಕೆಂದು ಸೂಚಿಸಿದ್ದಾರೆ. ನನ್ನ ಬಳಿ ಹಣವಿಲ್ಲ. ತೆರಿಗೆ ಹಣ ಕಡಿತ ಮಾಡಿ ಉಳಿದ ಹಣವನ್ನಾದರೂ ನೀಡಿ ಎಂದು ಉದ್ಯಮಿ ಕೋರಿದಾಗ ಅವರ ಮನವಿಯನ್ನು ತಿರಸ್ಕರಿಸಲಾಯಿತು. ವಂಚನೆಗೊಳಗಾದ ಅವರು ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net