1.27 ಕೋಟಿ ರೂ.ಉಳಿತಾಯ ಬಜೆಟ್​

Untitled-2
ಆನೇಕಲ್​ ಪುರಸಭೆ ಸಭಾಂಗಣದಲ್ಲಿ ಅಧ್ಯೆ ಸುಧಾ ನಿರಂಜನ್​ ಬಜೆಟ್​ ಪ್ರತಿ ಪ್ರದರ್ಶಿಸಿದರು. ಉಪಾಧ್ಯೆ ಭುವನಾ ದಿನೇಶ್​ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಮುನಾವರ್​ ಹಾಗೂ ಸದಸ್ಯರು ಇದ್ದರು.
Published on

ಆನೇಕಲ್​ : ಪುರಸಭೆ ಸಭಾಂಗಣದಲ್ಲಿ ಬುಧವಾರ ಅಧ್ಯೆ ಸುಧಾ ನಿರಂಜನ್​ 1.27 ಕೋಟಿ ರೂಪಾಯಿ ಉಳಿತಾಯ ಬಜೆಟ್​ ಮಂಡಿಸಿದ್ದು, 2025&26ನೇ ಸಾಲಿನಲ್ಲಿ 34.41ಕೋಟಿ ರೂಪಾಯಿ ಆದಾಯ ನಿರೀಸಲಾಗಿದೆ.

ಪಟ್ಟಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ಬಜೆಟ್​ನಲ್ಲಿ ಹೆಚ್ಚಿನ ಅನುದಾನ ಮೀಸಲಿಡಲಾಗಿದೆ. ಪಟ್ಟಣದಲ್ಲಿ ಪರಿಸರ ಸ್ನೇಹಿ ವಾತಾವರಣ ನಿರ್ಮಿಸಲು ಮತ್ತು ಗಿಡಗಳನ್ನು ನೆಡಲು ಬಜೆಟ್​ನಲ್ಲಿ 10 ಲಕ್ಷ ರೂ. ಮೀಸಲಿಡಲಾಗಿದೆ ಎಂದು ಅಧ್ಯೆ ಸುಧಾ ನಿರಂಜನ್​ ತಿಳಿಸಿದರು.

ಪಟ್ಟಣದ ರಾಮಕುಟೀರ ಆಧುನಿಕರಣಗೊಳಿಸಲು ಸಾಮಾಜಿಕ ಹೊಣೆಗಾರಿಕೆ ಮತ್ತು ಪುರಸಭಾ ಜಂಟಿ ಅನುದಾನದಲ್ಲಿ ಅಭಿವೃದ್ಧಿಪಡಿಸಲು 5 ಲಕ್ಷ ರೂ., ಅಂತಿಮ ಯಾತ್ರೆಯ ವಾಹನ ಖರೀದಿಗಾಗಿ 30 ಲಕ್ಷ ರೂ., ಪುರಸಭಾ ವ್ಯಾಪ್ತಿಯಲ್ಲಿ ನೀರು ಪೋಲಾಗದಂತೆ ತಡೆಯಲು 50 ಲಕ್ಷ ರೂ. ಹಣ ಮೀಸಲಿಡ ಲಾಗಿದ್ದು, ಇದರಿಂದ ಜಲ ಮೂಲಗಳ ಅಭಿ ವೃದ್ಧಿಗೆ ಪೂರಕವಾಗಲಿದೆ ಎಂದರು.

ಸದಸ್ಯ ರಾದ ಎನ್​.ಎಸ್​.ಪದ್ಮನಾಭ, ರಾಜೇಂದ್ರ ಪ್ರಸಾದ್​, ಸುರೇಶ್​ ಬಾಬು, ಪ್ರಕಾಶ್​, ಶ್ರೀಕಾಂತ್​, ರಾಜಪ್ಪ, ಪ್ರಕಾಶ್​, ಅನಿತಾ, ಭಾರತಿ, ಕವಿತಾ, ಮಾಲಾ, ಪವಿತ್ರಾ, ಪ್ರಸಾದ್​, ಲೋಕೇಶ್​ ಗೌಡ, ಬಾಬು, ಕಲಾವತಿ, ಶೋಭಾ, ಅನಸೂಯ, ಅನಿತಾ, ಹಫೀಜ್​ ಇದ್ದರು.

ಹೊಸ ಯೋಜನೆಗಳ ಘೋಷಣೆ : ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಜೆಟ್​ನಲ್ಲಿ ಅನುದಾನ ಮೀಸಲಿಡಲಾಗಿದ್ದು, ವೆಂಕಟೇಶ್ವರ ಚಿತ್ರಮಂದಿರ ಸಮೀಪ ಪ್ರಯಾಣಿಕರ ತಂಗುದಾಣ ನಿರ್ಮಿಸಲು 20 ಲಕ್ಷ ರೂ., ನಗರದ ಜನಸಂದಣಿ ಪ್ರದೇಶಗಳಲ್ಲಿ ಮಹಿಳೆಯರ ಹಿತದೃಷ್ಟಿಯಿಂದ ಬಯೋಪಿಂಕ್​ ಸುಸಜ್ಜಿತ 5 ಶೌಚಗೃಹ ನಿರ್ಮಾಣಕ್ಕೆ 10 ಲಕ್ಷ ರೂ. ಮೀಸಲಿಡಲಾಗಿದೆ. ನಿರುದ್ಯೋಗ ಯುವಕ&ಯುವತಿಯರಿಗೆ ಉದ್ಯೋಗ ಕಲ್ಪಿಸಲು ಖಾಸಗಿ ಕಂಪನಿಯವರೊಂದಿಗೆ ಉದ್ಯೋಗ ಮೇಳ ಆಯೋಜಿಸಲು 10 ಲಕ್ಷ ರೂ., ಪಟ್ಟಣದ ಎಎಸ್ಬಿ ಕಾಲೇಜು ಮುಂಭಾಗದ ಆಟದ ಮೈದಾನದಲ್ಲಿ ವಾಕಿಂಗ್​ ಪಾತ್​ ಮತ್ತು ವ್ಯಾಯಾಮ ಉಪಕರಣ ಅಳವಡಿಸಲು 50 ಲಕ್ಷ ರೂ. ಮೀಸಲಿಡಲಾಗಿದೆ. ಪತ್ರಕರ್ತರ ಮಕ್ಕಳ ವಿದ್ಯಾಭ್ಯಾಸ ಮತ್ತು ಆರೋಗ್ಯ ವಿಮೆಗಾಗಿ 10 ಲಕ್ಷ ರೂ.ಗಳನ್ನು ಮೀಸಲಿಡಲಾಗಿದೆ. ಸಾಹಿತಿಗಳು, ಸಾಮಾಜಿಕ ಕಳಕಳಿಯ ಹೋರಾಟಗಾರನ್ನು ಗುರುತಿಸಿ ಗೌರವಿಸಲು 5 ಲಕ್ಷ ರೂ., ಸ್ವಾಗತ ಫಲಕಉಳ್ಳ ಕಮಾನು ನಿರ್ಮಿಸಲು 50 ಲಕ್ಷ ರೂ., ಪ್ರಮುಖ ವೃತ್ತಗಳಲ್ಲಿ ಮಿನಿ ಗಡಿಯಾರ ಗೋಪುರಗಳನ್ನು ಸ್ಥಾಪಿಸಲು 25 ಲಕ್ಷ ರೂ. ವಿದ್ಯುತ್​ ಚಿತಾಗಾರ ಸ್ಥಾಪಿಸಲು 50 ಲಕ್ಷ ರೂ., ಮಕ್ಕಳ ಪಾರ್ಕ್​ ನಿರ್ಮಿಸಲು 15 ಲಕ್ಷ ರೂ. ಮೀಸಲಿಡಲಾಗಿದೆ.

ಕಾನೂನು ಮತ್ತು ಸುರಕ್ಷತೆಗೆ ಮೀಸಲು : ಆನೇಕಲ್​ ಪುರಸಭೆಯ ಬಜೆಟ್​ನಲ್ಲಿ ಸಿಸಿ ಕ್ಯಾಮರಾಗಳ ದುರಸ್ತಿ ಮತ್ತು ನಿರ್ವಹಣೆಗೆ 10 ಲಕ್ಷ ರೂಪಾಯಿ ಮೀಸಲಿಡಲಾಗಿದೆ. ಇದರಿಂದಾಗಿ ಪಟ್ಟಣದ ಕಾನೂನು ಸುವ್ಯವಸ್ಥೆ ಅಪರಾಧಗಳ ತಡೆಗಾಗಿ ಕ್ರಮವಹಿಸಿದ್ದಂತಾಗುತ್ತದೆ ಮತ್ತು ಪೋಲಿಸ್​ ಇಲಾಖೆಗೆ ಹೆಚ್ಚಿನ ಶಕ್ತಿ ತುಂಬಿದಂತಾಗುತ್ತದೆ.

ಗಸ್ತು ವಾಹನ ಖರೀದಿಗೆ 25 ಲಕ್ಷ : ಅಕ್ರಮ ನಿರ್ಮಾಣಗಳು, ಪುರಸಭೆ ಅನುಮತಿ ಇಲ್ಲದೆ ನಡೆಯುವ ಚಟುವಟಿಕೆಗಳ ನಿಯಂತ್ರಣಕ್ಕಾಗಿ ಗಸ್ತು ಮತ್ತು ತುರ್ತು ನಿರ್ವಹಣಾ ವಾಹನ ಖರೀದಿಗೆ ಬಜೆಟ್​ನಲ್ಲಿ 25 ಲಕ್ಷ ರೂ. ಮೀಸಲಿಡಲಾಗಿದೆ. ಸಾರ್ವಜನಿಕರಿಗೆ ಸುಲಭವಾಗಿ ಸೌಲಭ್ಯ ದೊರೆಯುವ ಜತೆಗೆ ಗಸ್ತು ವಾಹನ ಪಾರ್ಕಿಂಗ್​ ನಿರ್ವಹಣೆಗೂ ಉಪಯುಕ್ತವಾಗಲಿದೆ ಎಂದು ಪುರಸಭೆಯ ಅಧ್ಯೆ ಸುಧಾ ನಿರಂಜನ್​ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net