ಯಲ್ಲಮ್ಮನ ದೇವಿಗೆ 1.04 ಕೋಟಿ ರೂ. ಕಾಣಿಕೆ

26ugl1
ಯಲ್ಲಮ್ಮನ ಗುಡ್ಡದಲ್ಲಿ ದೇವಸ್ಥಾನದ ಸಿಬ್ಬಂದಿ ಹುಂಡಿ ಎಣಿಕೆ ಮಾಡುತ್ತಿರುವುದು. ಬಾಳೇಶ ಅಬ್ಬಾಯಿ, ಬಾಳೇಶ ಅಬ್ಬಾಯಿ, ಅಲ್ಲಮಪ್ರಭು ಪ್ರಭುನವರ ಇತರರಿದ್ದರು.
Published on

ಉಗರಗೋಳ: ಸಮೀಪದ ಯಲ್ಲಮ್ಮನ ಗುಡ್ಡದಲ್ಲಿ ಬುಧವಾರ ಹಾಗೂ ಗುರುವಾರ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಮುಗಿದಿದ್ದು, 1.04 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ. ಇದರಲ್ಲಿ 5.22 ಲ ರೂ. ಮೌಲ್ಯದ 53 ಗ್ರಾಂ ಚಿನ್ನಾಭರಣ, 1.27 ಲ ರೂ. ಮೌಲ್ಯದ 1276 ಗ್ರಾಂ ಬೆಳ್ಳಿ ಆಭರಣ ಹಾಗೂ 98.23 ಲ ರೂ. ನಗದು ಸೇರಿದೆ ಎಂದು ದೇವಸ್ಥಾನ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ ದುಡುಗುಂಟಿ ತಿಳಿಸಿದರು.

ಯಲ್ಲಮ್ಮನ ಸನ್ನಿಧಿಗೆ ಆಗಮಿಸಿದ ಲಾಂತರ ಭಕ್ತರು ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ದೇವಸ್ಥಾನದ ಹುಂಡಿಗೆ ಸಲ್ಲಿಸಿದ ಕಾಣಿಕೆ ಮೊತ್ತ ಎರಡು ದಿನ ಎಣಿಕೆ ಮಾಡಲಾಯಿತು. ಬೆಳಗಾವಿ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿ ಬಾಳೇಶ ಅಬ್ಬಾಯಿ, ಎಂ.ಪಿ. ದ್ಯಾಮನಗೌಡ್ರ, ಅಲ್ಲಮಪ್ರಭು ಪ್ರಭುನವರ, ಆರ್​.ಎಚ್​. ಸವದತ್ತಿ, ಎನ್​.ಎಂ. ಮುದಿಗೌಡರ್​, ಕೆನರಾ ಬ್ಯಾಂಕ್​ ಮ್ಯಾನೇಜರ್​ ಚಾಣಾಕ್ಷ, ಮಹಾಂತೇಶ ಕೋಡಳ್ಳಿ, ಪ್ರಭು ಹಂಜಗಿ, ಶಿವಾನಂದ ನೇಸರಗಿ, ಅನಿಲ ತೇರದಾಳ, ಜಗದೀಶ ರೇವಣ್ಣವರ, ಎಎಸ್​ಐ ಬಿ.ಆರ್​. ಸಣ್ಣಮಾಳಗೆ, ಆನಂದ ಗೊರವನಕೊಳ್ಳ, ಡಿ.ಡಿ. ನಾಗನಗೌಡರ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net