ಪ್ರೀತಿಯ ಅಕ್ಕಾ.. ಕನ್ನಡಿ ನೋಡ್ಕೊಳ್ಳಿ ಎಂದು ಕುಸುಮಾ ಹೇಳಿದ್ದು ಯಾಕೆ?!

Shobha
Published on

ಬೆಂಗಳೂರು: ‘ಡಿ.ಕೆ. ರವಿ ಹೆಸರನ್ನು ಯಾರೇ ಬಳಸಿಕೊಂಡರೂ ಅವರಿಗೆ ಒಳ್ಳೆಯ ದಾಗಲ್ಲ’ ಎಂಬ ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಕ್ಕೆ ರಾಜರಾಜೇಶ್ವರಿನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ತಿರುಗೇಟು ನೀಡಿದ್ದಾರೆ.

‘ಪ್ರೀತಿಯ ಅಕ್ಕ, ನನ್ನ ಗಂಡನ ಹೆಸರಿನಲ್ಲಿ ರಾಜಕೀಯ ಮಾಡಿದವರು, ಮಾಡುತ್ತಿರೋರು ಯಾರು? ಎನ್ನು ವುದನ್ನು ಇಡೀ ದೇಶವೇ ನೋಡಿದೆ. ನೋಡುತ್ತಿದೆ. ಈ ಸಂದರ್ಭದಲ್ಲಿ ನನಗೆ ಅಕ್ಕಮಹಾ ದೇವಿ ಅವರ ‘ನೊಂದವರ ನೋವ ನೋಯದವರೆತ್ತ ಬಲ್ಲರೊ’ ಎಂಬ ವಚನ ನೆನಪಿಗೆ ಬರುತ್ತಿದೆ’ ಎಂದು ಕರಂದ್ಲಾಜೆಯವರನ್ನು ಉದ್ದೇಶಿಸಿ ಲೇವಡಿ ಮಾಡಿದ್ದಾರೆ.

ರವಿ ಅವರ ಹೆಸರನ್ನು ಬಳಸಿಕೊಂಡವರಿಗೆ ಒಳ್ಳೆಯದಾಗುವುದಿಲ್ಲ ಎಂದಿದ್ದೀರಿ! ಇದು ನಿಮಗೆ ನೀವೇ ಹೇಳಿಕೊಂಡಂತಿದೆ. ಕನ್ನಡಿ ಮುಂದೆ ನಿಂತು ಇನ್ನೊಮ್ಮೆ ಈ ಹೇಳಿಕೆ ಕೊಟ್ಟು ನೋಡಿ. ಸತ್ಯ ಮನದಟ್ಟಾಗಬಹುದು’ ಎಂದು ಕುಸುಮಾ ಹೇಳಿದ್ದಾರೆ. ಡಿ.ಕೆ. ರವಿ ಮೃತಪಟ್ಟ ಸಂದರ್ಭದಲ್ಲಿ ಬಿಜೆಪಿ ಮತ್ತು ಶೋಭಾ ಕರಂದ್ಲಾಜೆ ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದರು. ಈ ವಿಚಾರವನ್ನು ಪ್ರಸ್ತಾಪಿಸದೇ ಕುಸುಮಾ ಶೋಭಾರನ್ನು ಕುಟುಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net