ಸದೃಢ ದೇಹದಲ್ಲಿ ಸದೃಢ ಆರೋಗ್ಯ: ವಿಜಯಕುಮಾರ ಹಿರೇಮಠ

25GDG04
ಗದಗ ನಗರದ ರಾಜೀವ ಗಾಂಧಿ ನಗರದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ನಂ. 4 ರಲ್ಲಿ ವಿದ್ಯಾಥಿರ್ಗಳಿಗೆ ಉಚಿತ ರಕ್ತತಪಾಸಣೆ ನಡೆಸಿ ಶಿಬಿರ ಉದ್ಘಾಟಿಸಿ ಮಾತನಾಡಿದರು ರಕ್ತಗುಂಪಿನ ಚೀಟಿ ವಿತರಿಸಲಾಯಿತು. ವಿಜಯಕುಮಾರ ಹಿರೇಮಠ, ದತ್ತಾತ್ರೇಯ ವೈಕುಂಠೆ, ಕೆ.ಎಸ್​.ಬೇಲೇರಿ ಹಲವರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಮಕ್ಕಳ ಮನಸ್ಸನ್ನು ಅರಿತು ಮಕ್ಕಳೊಂದಿಗೆ ಆತ್ಮೀಯರಾದಾಗ, ಮಕ್ಕುಳು ಆತ್ಮೀಯರಾಗಿ ಇನ್ನಷ್ಟು ಹಸನ್ಮುಖಿಗಳಾಗಿ ಕಲಿಕೆಯಲ್ಲಿ ತೊಡಗುತ್ತಾರೆ ಎಂದು ರೋಟರಿ ಸೆಂಟ್ರಲ್​ ಕ್ಲಬ್​ ವಿಜಯಕುಮಾರ ಹಿರೇಮಠ ಹೇಳಿದರು.
ನಗರದ ರಾಜೀವ ಗಾಂಧಿ ನಗರದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ನಂ. 4 ರಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ರೋಟರಿ ಗದಗ ಸೆಂಟ್ರಲ್​ದಿಂದ ಶನಿವಾರ ವಿದ್ಯಾಥಿರ್ಗಳಿಗೆ ಏರ್ಪಡಿಸಿದ್ದ ಉಚಿತ ರಕ್ತತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಆರೋಗ್ಯ ಮತ್ತು ಶಿಣದ ಬಗ್ಗೆ ನಾವೆಲ್ಲರೂ ಕಾಳಜಿ ವಹಿಸಬೇಕು. ಸರ್ಕಾರದ ವಿವಿಧ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಶೈಣಿಕವಾಗಿ ಮುನ್ನಡೆ ಸಾಧಿಸಬೇಕು. ಮನುಷ್ಯನಿಗೆ ಮುಖ್ಯವಾಗಿ ಆರೋಗ್ಯ ಅಗತ್ಯವಿದೆ. ಸದೃಢ ದೇಹದಲ್ಲಿ ಸದೃಢ ಆರೋಗ್ಯ ಇರುತ್ತದೆ. ಮಕ್ಕಳು ಸರಿಯಾದ ಆಹಾರ ಪದ್ದತಿ ಅನುಸರಿಸಬೇಕು. ಇದರಿಂದ ರಕ್ತವು ವೃದ್ಧಿಯಾಗುತ್ತದೆ ಎಂದರು.
ಮಕ್ಕಳ ದಿನಾಚರಣೆಯ ಅಂಗವಾಗಿ ರಕ್ತತಪಾಸಿಗರಾದ ಡಾ. ದತ್ತಾತ್ರೇಯ ವೈಕುಂಠೆ 110 ಮಕ್ಕಳಿಗೆ ಉಚಿತ ರಕ್ತತಪಾಸಣೆ ನಡೆಸಿ ರಕ್ತಗುಂಪಿನ ಚೀಟಿ ವಿತರಿಸಿದರು.
ಕೆ.ಎಸ್​.ಬೇಲೇರಿ, ಕೆ. ಎ. ದಾವಲಖಾನ್​, ಎಸ್​. ಎಂ. ರಡ್ಡೇರ, ಎನ್​. ಎಚ್​. ಜಕ್ಕಲಿ, ಎಸ್​. ಎಸ್​. ಬಳ್ಳಾರಿ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net