80 ಅಭ್ಯಥಿರ್ಗಳಿಗೆ ನೇಮಕಾತಿ ಪತ್ರ ವಿತರಣೆ

IMG_20231130_165517_408.jpg
Published on

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಬಿವಿಬಿ ಇಂಜಿನಿಯರಿಂಗ್ ಕಾಲೇಜು ಆವರಣದ ದೇಶಪಾಂಡೆ ಫೌಂಡೇಷನ್ ಸಭಾಂಗಣದಲ್ಲಿ ಆದಾಯ ತೆರಿಗೆ ಇಲಾಖೆ ಸಹಯೋಗದಲ್ಲಿ ಗುರುವಾರ ರೋಜಗಾರ್ ಮೇಳ ಆಯೋಜಿಸಲಾಗಿತ್ತು.

ರೈಲ್ವೆ ಇಲಾಖೆ, ಎ್ಸಿಐ, ಅಂಚೆ ಕಚೇರಿ ಸೇರಿದಂತೆ ವಿವಿಧ ಇಲಾಖೆಯ ಸುಮಾರು 80 ನೇಮಕಾತಿ ಪತ್ರಗಳನ್ನು ಲಾನುಭವಿಗಳಿಗೆ ಹಸ್ತಾಂತರಿಸಲಾಯಿತು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಅಭ್ಯಥಿರ್ಗಳಿಗೆ ನೇಮಕಾತಿ ಪತ್ರ ವಿತರಿಸಿದರು.

ಇದಕ್ಕೂ ಮೊದಲು ದೇಶದ ವಿವಿಧ ಕಡೆಗಳಲ್ಲಿ ಏರ್ಪಡಿಸಿದ್ದ ರೋಜಗಾರ ಮೇಳಕ್ಕೆ ಆನ್ಲೈನ್ ಮೂಲಕ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಭವಿಷ್ಯದ ಯೋಜನೆಗಳ ಬಗ್ಗೆ ವಿವರಿಸಿದರು. ಉದ್ಯೋಗಾಕಾಂಗಳು ಧೈರ್ಯದಿಂದ ಇರಬೇಕು. ಮುಂದಿನ ದಿನಗಳಲ್ಲಿ ಇನ್ನೂ ಹಲವು ಯೋಜನೆಗಳು ಜಾರಿಯಾಗಲಿವೆ ಎಂದರು.

ನೂರಾರು ವಿದ್ಯಾಥಿರ್ಗಳು, ಉದ್ಯೋಗಾಕಾಂಗಳು, ಸರ್ಕಾರಿ ಅಧಿಕಾರಿಗಳು, ಕೇಂದ್ರ ಸಚಿವರು ಪ್ರಧಾನಿಯ ಭಾಷಣ ಆಲಿಸಿದರು.

ನೇಮಕಾತಿ ಹೊಂದಿದ ಅಭ್ಯಥಿರ್ಗಳೊಂದಿಗೆ ಭಾವಚಿತ್ರ ತೆಗೆಸಿಕೊಂಡ ನಂತರ ಮಾತನಾಡಿದ ಸಚಿವ ಜೋಶಿ ಅವರು, 10 ಲಕ್ಷ ಉದ್ಯೋಗ ಒದಗಿಸುವ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿತ್ತು. ಅದರಂತೆ ಈಗಾಗಲೇ ರೋಜಗಾರ್ ಮೇಳದ ಮೂಲಕ 8 ಲಕ್ಷ ಜನರಿಗೆ ಉದ್ಯೋಗ ಒದಗಿಸಲಾಗಿದೆ. ಬರುವ ದಿನಗಳಲ್ಲಿ ಇನ್ನಷ್ಟು ಆಕಾಂಗಳಿಗೆ ಉದ್ಯೋಗವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಿದೆ ಎಂದರು.

ಆದಾಯ ತೆರಿಗೆ ಇಲಾಖೆ ಮುಖ್ಯ ಆಯುಕ್ತೆ ಅಪರ್ಣಾ ರಾವ್, ಗೋವಾದ ಮುಖ್ಯ ಆಯುಕ್ತ ಷಹಜಿ ಪಿ. ಜೇಕಬ್, ಕೇಶವ್ ದಿಕ್ಷೀತ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net