

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಜೈನ ಸೇವಾ ಸಮಿತಿ ಆಶ್ರಯದಲ್ಲಿ ಸ್ಪೋರ್ಟ್ಸ್ ಪಾರ್ಕ್ನಲ್ಲಿ ಆಯೋಜಿಸಿದ್ದ ಚಾಂಪಿಯನ್ ಲೀಗ್ ಡೇ ಆಂಡ್ ನೈಟ್ ವಾಲಿಬಾಲ್ ಪಂದ್ಯಾವಳಿಯಲ್ಲಿ ರಾಯಲ್ ಬಾಯ್ಸ ತಂಡ ಚಾಂಪಿಯನ್ ಆಗಿದೆ.
ಫೈನಲ್ನಲ್ಲಿ ಪಟೇಲ್ ಸೂಟ್ಸ್ ವಿರುದ್ಧ 15-14, 15-11 ಅಂಕಗಳಿಂದ ಜಯ ಗಳಿಸಿತು. ಪಂದ್ಯಾವಳಿಯಲ್ಲಿ 10 ತಂಡಗಳು ಭಾಗವಹಿಸಿದ್ದವು. ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಮಹೇಶ ತೆಂಗಿನಕಾಯಿ, ಭವರಲಾಲ್ ಜೈನ್, ಉಕಚಂದ್ ಬಾಫಣಾ, ಸುರೇಶ ಮೆಹ್ತಾ, ನರೇಂದ್ರ ರಾಕಾ, ಸಂಸ್ಥಾಪಕ ಅಧ್ಯಕ್ಷ ಮಹಾವೀರ ಪಾಲರೇಛಾ, ಸಂಸ್ಥೆ ಅಧ್ಯಕ್ಷ ಕಮಲೇಶ ಜೈನ ಇದ್ದರು.
ಜೈನ್ ಸೇವಾ ಸಮಿತಿ ಸದಸ್ಯರಾದ ಪ್ರಕಾಶ ಜೈನ್, ವಿಕ್ರಂ ಬಗ್ರೇಚಾ, ಮುಖೇಶ ಕೊಠಾರಿ, ವಿನೋದ ಲುಂಕರ, ಹೇಮಲ್ ಚೋಪ್ರಾ, ಪ್ರದೀಪ ಮೆಹ್ರಾ, ರಾಜೀವ ಭಾಲ್ವಾಟ್, ಅನೇಕರು ಪಂದ್ಯಾವಳಿ ಯಶಸ್ಸಿಗೆ ಶ್ರಮಿಸಿದರು.