

ಜಮಖಂಡಿ: ಪದವಿ ಪೂರ್ವ ಕಾಲೇಜುಗಳ ತಾಲೂಕುಮಟ್ಟದ ಕ್ರೀಡಾಕೂಟದಲ್ಲಿ ನಗರದ ರಾಯಲ್ ಪ್ಯಾಲೇಸ್ ಪದವಿ ಪೂರ್ವ ಕಾಲೇಜು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದೆ.
ಬಾಗಲಕೋಟೆಯ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಹಾಗೂ ತುಂಗಳದ ಸರ್ಕಾರಿ ಪಪೂ ಕಾಲೇಜು ಆಶ್ರಯದಲ್ಲಿ ನಡೆದ 2024-25ನೇ ಸಾಲಿನ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಎಲ್ಲ ವಿಭಾಗಗಳ ಕ್ರೀಡೆಗಳಲ್ಲಿ ರಾಯಲ್ ಪ್ಯಾಲೇಸ್ ಪಪೂ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ ಅಧ್ಯಕ್ಷ ಮಾಜಿ ಶಾಸಕ ಆನಂದ ಸಿ. ನ್ಯಾಮಗೌಡ, ಪ್ರಾಚಾರ್ಯ ರೀತಾ ಜೈನರ, ಆಡಳಿತಾಧಿಕಾರಿ ಬಸವರಾಜ ಸಿ. ನ್ಯಾಮಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.