

ಬೆಳಗಾವಿ: ಗ್ರಾಹಕರಿಗೆ ನವನವೀನ ಶೈಲಿಯ ಪೀಠೋಪಕರಣ ಒಂದೇ ಕಡೆ ಖರೀದಿಸುವ ಅವಕಾಶವನ್ನು "ರಾಯಲ್ ಓಕ್' ಮಳಿಗೆಯಲ್ಲಿ ಕಲ್ಪಿಸಲಾಗಿದ್ದು, ಅಂತಾರಾಷ್ಟ್ರೀಯ ಉತ್ಪನ್ನಗಳನ್ನು ಕೈಗೆಟಕುವ ದರದಲ್ಲಿ ಖರೀದಿಸಬಹುದು ಎಂದು ಹೊಸ ಸ್ಟೋರ್ ಓಪನಿಂಗ್ ವಿಭಾಗದ ಮುಖ್ಯಸ್ಥ ತಮ್ಮಯ್ಯ ಕೊಟೇರ್ ತಿಳಿಸಿದರು.
ಬೆಳಗಾವಿ ನಗರದ ಬಾಕ್ಸೆಟ್ ರಸ್ತೆಯಲ್ಲಿ ಬುಧವಾರ "ರಾಯಲ್ ಓಕ್'ನ 63ನೇ ಮಳಿಗೆ ಉದ್ಘಾಟಿಸಿ ಮಾತನಾಡಿದ ಅವರು, ಹೊಸ ಮಳಿಗೆಯು 12 ಸಾವಿರ ಚದರ ಅಡಿಗಳಷ್ಟು ವಿಶಾಲ ಸ್ಥಳವನ್ನು ಹೊಂದಿದ್ದು, ಇಲ್ಲಿ ಲಿವಿಂಗ್ ರೂಮ್, ಬೆಡ್ ರೂಮ್, ಡೈನಿಂಗ್ ಏರಿಯಾ, ಸ್ಟಡಿ ರೂಮ್ ಮತ್ತು ಆಫೀಸ್, ಔಟ್ಡೋರ್, ಹೋಮ್ ಡೆಕೋರ್, ಮ್ಯಾಟ್ರೆಸ್ ಮೊದಲಾದ ಪೀಠೋಪಕರಣಗಳು ಲಭ್ಯ ಇವೆ. ಉದ್ಘ್ಘಾಟನಾ ಕೊಡುಗೆಯಾಗಿ ಪ್ರತಿಯೊಂದು ಖರೀದಿಗೂ ವಿವಿಧ ವಸ್ತುಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದರು.
ರಾಯಲ್ ಓಕ್ ಫ್ರಾಂಚೈಸ್ ಪಾಲುದಾರ ಸುನೀಲ್ ಕುಮಾರ್ ಮಾತನಾಡಿ, ದೇಶದಾದ್ಯಂತ ರಾಯಲ್ ಓಕ್ 200 ಮಳಿಗೆ ಹೊಂದಿದ್ದು, ಇದೀಗ ಕರ್ನಾಟಕದಲ್ಲಿ ಹೊಸದಾಗಿ 63ನೇ ಮಳಿಗೆಯನ್ನು ಬೆಳಗಾವಿಯಲ್ಲಿ ಆರಂಭಿಸಲಾಗಿದೆ. ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಅತ್ಯುತ್ತಮ ಪೀಠೋಪಕರಣಗಳು ಮತ್ತು ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ಈ ಮಳಿಗೆ ಆರಂಭಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ವಿನಂತಿಸಿದರು.
ರಾಯಲ್ ಓಕ್ ಮಳಿಗೆಗಳಲ್ಲಿ ಲಭ್ಯವಿರುವ ವಿನೂತನ, ಹೊಸ ಬಗೆಯ ಪೀಠೋಪಕರಣಗಳನ್ನು ದೇಶ, ವಿದೇಶಗಳಲ್ಲಿರುವ 480 ಕ್ಕೂ ಹೆಚ್ಚು ಫ್ಯಾಕ್ಟರಿಗಳಲ್ಲಿ ತಯಾರಿಸಲಾಗುತ್ತಿದ್ದು, 5 ಸಾವಿರಕ್ಕೂ ಹೆಚ್ಚು ಜನರು ನುರಿತ ಕೆಲಸಗಾರರಿದ್ದಾರೆ. ಉತ್ಕ ೃಷ್ಟ ಗುಣಮಟ್ಟದ, ಹೊಸ ಬಗೆಯ ವಿನ್ಯಾಸದ ಪೀಠೋಕರಣಗಳು ಮಾತ್ರ ನಮ್ಮಲ್ಲಿ ಲಭ್ಯವಿದ್ದು, ಗ್ರಾಹಕರಿಗೆ ಆನ್ಲೈನ್ ಮಾರುಕಟ್ಟೆ ಜತೆಗೆ ಇಎಂಐ ಸೌಲಭ್ಯ ಕೂಡ ಒದಗಿಸಲಾಗುತ್ತಿದೆ ಎಂದು ಹೇಳಿದರು.
ರಾಯಲ್ ಓಕ್ ಫ್ರಾಂಚೈಸಿ ಆಪರೇಷನ್ ಮುಖ್ಯಸ್ಥ ಮಹೇಶ ಪಂಡಿತ ಮಾತನಾಡಿ, ಈ ಮಳಿಗೆಯಲ್ಲಿ ವಿಶೇಷವಾದ "ಕಂಟ್ರಿ ಸ್ಕೋರ್' ವಿಭಾಗವಿದ್ದು, ಇಲ್ಲಿ ಅಮೆರಿಕ, ಇಟಲಿ, ಮಲೇಷಿಯಾ ಮತ್ತು ಭಾರತದ ಉತ್ತಮ ಮತ್ತು ಅನನ್ಯ ಪೀಠೋಪಕರಣಗಳನ್ನು ಪ್ರದರ್ಶಿಸಲಾಗುತ್ತದೆ. ರಾಯಲ್ಓಕ್ ಭಾರತದಾದ್ಯಂತ ಮಹಾನಗರಗಳು ಸೇರಿ 2 ಮತ್ತು 3ನೇ ಶ್ರೇಣಿಯ ನಗರಗಳಲ್ಲಿ ಮಳಿಗೆಗಳನ್ನು ಆರಂಭಿಸುತ್ತಿದೆ. 1 ಕೋಟಿಗೂ ಹೆಚ್ಚು ಮಂದಿಗೆ ಉತ್ತಮ ಸೇವೆ ಒದಗಿಸಲಾಗುತ್ತಿದೆ. ನಾವು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮತ್ತು ಗುಜರಾತ್ನಿಂದ ನಾಗಾಲ್ಯಾಂಡ್ವರೆಗೆ ಮಳಿಗೆಗಳನ್ನು ಹೊಂದಿದ್ದೇವೆ ಎಂದರು.
ರಾಯಲ್ ಓಕ್ ಫ್ರಾಂಚೈಸ್ ಪಾಲುದಾರರಾದ ಅನುಬಾಯಿ, ರಾವೇಂದ್ರ, ಶ್ವೇತಾ ಇತರರಿದ್ದರು.