

ಕುಂದಾಪುರ: ಕುಂದಾಪುರ ರೋಯಲ್ ಕ್ಲಬ್‌ನ 2025-26ನೇ ಸಾಲಿನ ಪದಾಧಿಕಾರಿಗಳ ಪದ ಪ್ರದಾನ ಕಾರ್ಯಕ್ರಮ ಕುಂದಾಪುರದ ರೋಯಲ್ ಸಭಾಭವನದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಜೇಸಿಐ ಗೋಪಾಲ್ ಪೂಜಾರಿ ಅವರು ನೂತನ ಅಧ್ಯಕ್ಷ ಪ್ರಮೋದ ಕುಮಾರ ಅವರಿಗೆ ಪ್ರಮಾಣ ವಚನ ಭೋದಿಸಿ ಸಂಸ್ಥೆಯ 41 ವರ್ಷದ ಸಮಾಜಮುಖಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಸಂಸ್ಥೆ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಯು., ನಿತ್ಯಾನಂದ ಕೆ.ಉಪಸ್ಥಿತರಿದ್ದರು.
ನೂತನ ಪದಾಧಿಕಾರಿ, ಉಪಾಧ್ಯಕ್ಷರಾದ ಗೋಪಾಲ್ ವಿ.ಮತ್ತು ವೆಂಕಟೇಶ ಬೆಟ್ಟಿನ್, ಕಾರ್ಯದರ್ಶಿ ಪ್ರಶಾಂತ್ ಮೊಗವೀರ, ಜತೆ ಕಾರ್ಯದರ್ಶಿ ಸಂತೋಷ ಮೆಂಡನ್, ಸಂಘಟನಾ ಕಾರ್ಯದರ್ಶಿಗಳಾದ ನವೀನ ಪಿ., ದುಂಡಿರಾಜ್, ಪ್ರವೀಣ ಆಚಾರ್ಯ, ಪ್ರದೀಪ್, ಕೋಶಾಧಿಕಾರಿ ನಾಗರಾಜ ಆಚಾರ್ಯ, ಲೆಕ್ಕಪರಿಶೋಧಕರ ಭಾಸ್ಕರ ಗಾಣಿಗ ಅಧಿಕಾರ ಸ್ವೀಕರಿಸಿದರು. ಕಾರ್ಯದರ್ಶಿ ಪ್ರಶಾಂತ ಮೊಗವೀರ ವಂದಿಸಿದರು. ರತ್ನಾಕರ ಕೆ.ಕಾರ್ಯಕ್ರಮ ನಿರ್ವಹಿಸಿದರು.