ರಾಜ ಬೀದಿಯಲ್ಲಿ ರಾಯರ ರಥೋತ್ಸವ

38
Published on

ಮೈಸೂರು: ಸರಸ್ವತಿಪುರಂನಲ್ಲಿರುವ ಶ್ರೀಕೃಷ್ಣಧಾಮದಲ್ಲಿ ಶ್ರೀಕೃಷ್ಣಾಪುರ ಹಾಗೂ ಶ್ರೀಕೃಷ್ಣ ಮಿತ್ರ ಮಂಡಳಿಯಿಂದ ಶ್ರೀರಾಘವೇಂದ್ರ ಗುರು ಸಾರ್ವಭೌಮರ 354ನೇ ಆರಾಧನಾ ಮಹೋತ್ಸವ ಆಚರಿಸಲಾಯಿತು.

ಬೆಳಗ್ಗೆ 7ರಿಂದ ರಾಯರಿಗೆ ಪಂಚಾಮೃತ ಅಭಿಷೇಕ, 9.30ಕ್ಕೆ ಪಾದಪೂಜೆ, ಕನಕಾಭಿಷೇಕ, 11.30ಕ್ಕೆ ಅಲಂಕಾರ ಸೇವೆ, 12.30 ಕ್ಕೆ ಮಹಾಮಂಗಳಾರತಿ ಹಾಗೂ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.

ಸಂಜೆ ರಾಯರ ಪಲ್ಲಕ್ಕಿ ಸೇವೆ, ರಾಜ ಬೀದಿಯಲ್ಲಿ ರಥೋತ್ಸವ, ರಂಗ ಪೂಜೆ ತೊಟ್ಟಿಲುಸೇವೆ ನೆರವೇರಿತು. ಸಾವಿರಾರು ಭಕ್ತರು ರಾಯರ ದರ್ಶನ ಪಡೆದರು. ಶ್ರೀಕೃಷ್ಣ ಟ್ರಸ್ಟ್ ಉಪಾಧ್ಯಕ್ಷ ರವಿಶಾಸ್ತ್ರಿ, ಶ್ರೀಕೃಷ್ಣ ಮಿತ್ರ ಮಂಡಳಿ ಅಧ್ಯಕ್ಷ ಎನ್. ಗೋಪಾಲಕೃಷ್ಣನ್, ಉಪಾಧ್ಯಕ್ಷ ಶ್ರೀವಾತ್ಸ ರಾವ್, ಕಾರ್ಯದರ್ಶಿ ಪಿ ಜಿ ಗುರುಪ್ರಸಾದ್, ಶ್ರೀಕೃಷ್ಣ ಟ್ರಸ್ಟ್‌ನ ಮಾಜಿ ಅಧ್ಯಕ್ಷ ಮೋಹನ್, ಪಿ.ಎಸ್.ಶೇಖರ್, ಕೆ.ವಿ.ಶ್ರೀಧರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net