ರೌಡಿಶೀಟರ್ ಗಡಿಪಾರು

deportation
Published on

ಹುಬ್ಬಳ್ಳಿ: ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ನಗರದ ಮೋಮಿನ ಪ್ಲಾಟ್ ನಿವಾಸಿ ರೌಡಿಶೀಟರ್ ಖಾಜಾ ಬಂದೇನವಾಜ ಸಮೀರ ತೈಬಾ ತಂದೆ ಮಹ್ಮದಗೌಸ್ ಸಿಂಗೋಟಿ (20) ಎಂಬಾತನನ್ನು 6 ತಿಂಗಳ ಅವಧಿಗೆ ಬಳ್ಳಾರಿ ಜಿಲ್ಲೆಯ ಕೌಲಬಜಾರ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.
ಈತನ ಮೇಲೆ ಈಗಾಗಲೇ ಹುಬ್ಬಳ್ಳಿಯ ಕಮರಿಪೇಟ, ಹುಬ್ಬಳ್ಳಿ ಶಹರ, ಕಸಬಾ ಪೇಟ ಹಾಗೂ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಹಲವಾರು ಪ್ರಕರಣಗಳು ದಾಖಲಾಗಿವೆ. ಕಮರಿಪೇಟ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಸಹ ತೆರೆಯಲಾಗಿತ್ತು. ಆದರೂ ತನ್ನ ವರ್ತನೆ ಸುಧಾರಿಸಿಕೊಳ್ಳದೆ ಮತ್ತೆ ಹೊಡೆದಾಟ, ದರೋಡೆ, ಸಾರ್ವಜನಿಕರ ಮೇಲೆ ಹಲ್ಲೆ ಮಾಡಿ ಬೆದರಿಸುವಂತಹ ಕಾನೂನು ಬಾಹಿರ ಚಟುವಟಿಕೆ ಮುಂದುವರಿಸಿದ್ದ. ಹಾಗಾಗಿ ಈತನ ಅಪರಾಧಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ 6 ತಿಂಗಳ ಅವಧಿಗೆ ಗಡಿಪಾರು ಮಾಡಿ ಹು-ಧಾ ಪೊಲೀಸ್ ಆಯುಕ್ತಾಲಯ ಆದೇಶ ಹೊರಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net