ರೌಡಿಶೀಟರ್ ಗಡಿಪಾರು

deportation
Published on

ಹುಬ್ಬಳ್ಳಿ: ಧಾರವಾಡದ ಗಾಂಧಿನಗರದ ಬಾಲರಾಜ ಅಲಿಯಾಸ್ ಬಾಲ್ಯಾ (38) ಎಂಬಾತನನ್ನು 6 ತಿಂಗಳವರೆಗೆ ಬೀದರ್ ಜಿಲ್ಲೆಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.

ಬಾಲರಾಜನ ಮೇಲೆ ಜೀವ ಬೆದರಿಕೆ, ಮಾನಭಂಗ, ಹಲ್ಲೆ, ಅಪಹರಣ, ಕೊಲೆ ಬೆದರಿಕೆ ಸೇರಿದಂತೆ ಒಟ್ಟು 8 ಪ್ರಕರಣಗಳು ದಾಖಲಾಗಿದ್ದವು. ನವನಗರ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟ ಕೂಡ ತೆರೆಯಲಾಗಿತ್ತು. ಪದೇ ಪದೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುತ್ತಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಪ್ರವೃತ್ತಿ ಹೊಂದಿದ್ದ. ಹೀಗಾಗಿ ಹು-ಧಾ ನ್ಯಾಯಾಲಯದ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ಆದೇಶದ ಮೇರೆಗೆ 6 ತಿಂಗಳವರೆಗೆ ಬೀದರ್ ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ ಎಂದು ಹು-ಧಾ ನಗರ ಪೊಲೀಸ್ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net