

ಶಿವಮೊಗ್ಗ: ಮದ್ಯದ ಗುಂಗಿನಲ್ಲಿ ಎದುರಾಳಿ ಗ್ಯಾಂಗ್‌ಗೆ ಠಕ್ಕರ್ ಕೊಟ್ಟಿದ್ದ ರೌಡಿಶೀಟರ್ ಅನ್ನು ಅಪಹರಿಸಿದ ತಂಡವೊಂದು ಹಲ್ಲೆ ಮಾಡಿದ್ದಲ್ಲದೆ, ಬೆತ್ತಲೆಗೊಳಿಸಿ ವಿಡಿಯೋ ಮಾಡಿಕೊಂಡಿರುವ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ.
ಸ್ನೇಹಿತರೊಂದಿಗೆ ಬಾರ್‌ವೊಂದರಲ್ಲಿ ಮದ್ಯ ಸೇವಿಸುತ್ತಿದ್ದಾಗ ಎದುರು ಟೇಬಲ್‌ನಲ್ಲಿ ಕುಳಿತಿದ್ದ ಕೆಲವರಿಗೆ ಕೀಟಲೆ ಮಾಡಿದ್ದ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಧಮ್ಕಿ ಕೂಡ ಹಾಕಿದ್ದ. ಇದರಿಂದ ಎದುರಾಳಿ ಗುಂಪು ರೌಡಿಶೀಟರ್ ಸ್ನೇಹಿತನ ಮೇಲೆ ಹಲ್ಲೆ ಮಾಡಿತ್ತು.
ಈ ವಿಚಾರ ತಿಳಿದ ರೌಡಿಶೀಟರ್ ಸ್ನೇಹಿತನನ್ನು ನೋಡಲು ಆಸ್ಪತ್ರೆಗೆ ತೆರಳಿದ್ದಾಗ ಅಲ್ಲಿಂದಲೇ ಅಪಹರಿಸಿ ಹೊರವಲಯಕ್ಕೆ ಕರೆದೊಯ್ದು ಥಳಿಸಿದೆ. ಜತೆಗೆ ರೌಡಿಶೀಟರ್ ಅನ್ನು ಬೆತ್ತಲೆಗೊಳಿಸಿ ವಿಡಿಯೋ ಮಾಡಿಕೊಂಡು ವೈರಲ್ ಮಾಡಿದೆ. ಇಷ್ಟೆಲ್ಲ ಆದರೂ ರೌಡಿಶೀಟರ್ ಪೊಲೀಸರಿಗೆ ದೂರು ನೀಡಿಲ್ಲ. ಬದಲಿಗೆ ಆತನ ಮೇಲೆ ಹಳೇ ವಾರೆಂಟ್ ಜಾರಿ ಆಗಿದ್ದ ಕಾರಣ ಆತನೇ ಸೆಂಟ್ರಲ್ ಜೈಲ್‌ನಲ್ಲಿ ಮುದ್ದೆ ಮುರಿತಯುವಂತಾಗಿದೆ.