ಬೈಕ್​ನಲ್ಲಿ ಹೋಗುತ್ತಿದ್ದ ರೌಡಿಶೀಟರ್​ ಕೊಲೆ

crime
Published on

ಕೆಜಿಎಫ್​-: ರೌಡಿಶೀಟರ್​ ಒಬ್ಬನನ್ನು ನಾಲ್ವರು ರೌಡಿಗಳು ಹಾಡ ಹಗಲೇ ಲಾಂಗ್​ನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಆಂಡ್ರಸನ್​ಪೇಟೆಯ ನ್ಯೂ ಮಾಡಲ್​ ಹೌಸ್​ನ ನಿವಾಸಿ, ರೌಡಿಶೀಟರ್​ ಶಿವಕುಮಾರ್​(28) ಮೃತ.

ಭಾನುವಾರ ಬೆಳಗ್ಗೆ ತನ್ನ ಗೆಳತಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಬಂಗಾರಪೇಟೆ ತಾಲೂಕಿನ ಕಾಮಸಮದ್ರ ಕಡೆಗೆ ಹೋಗುತ್ತಿದ್ದಾಗ ವಿರುಪಾಕ್ಷಿಪುರ ಗ್ರಾಮದ ಬಳಿ ಹಿಂದೆಯಿಂದ ಬಂದ ನಾಲ್ವರು ರೌಡಿಗಳು ಶಿವಕುಮಾರ್​ ಮೇಲೆ ಲಾಂಗ್​ಗಳಿಂದ ದಾಳಿ ಮಾಡಿದ್ದಾರೆ. ಆಗ ತೀವ್ರ ಗಾಯಗೊಂಡು ರೌಡಿಗಳ ದಾಳಿಯಿಂದ ತಪ್ಪಿಸಿಕೊಂಡು ಸುಮಾರು ಒಂದು ಕಿಲೋ ಮೀಟರ್​ ದೂರ ಕಾಮಸಮುದ್ರ ಅರಣ್ಯ ಪ್ರದೇಶದತ್ತ ಓಡಿ ಹೋಗಿ ಮೃತಪಟಿದ್ದಾನೆ ಎನ್ನಲಾಗಿದೆ. ಶಿವಕುಮಾರ್​ ಗೆಳತಿ ಕೊಲೆಯ ಮಾಹಿತಿಯನ್ನು ಆಂಡ್ರಸನ್​ಪೇಟೆ ಪೊಲೀಸರಿಗೆ ತಿಳಿಸಿದ ನಂತರ ಪೊಲೀಸರು ಡ್ರೋನ್​ ಬಳಸಿ ಶವವನ್ನು ಪತ್ತೆ ಮಾಡಿ, ಮರೋಣೋತ್ತರ ಪರೀಕ್ಷೆಗೆ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಾಯು ವಿಹಾರಕ್ಕೆ ತೆರಳಿದ್ದ ನಿವೃತ್ತ ಉಪನ್ಯಾಸಕರು ಸಾವು

ಬಂಗಾರಪೇಟೆ: ಪಟ್ಟಣದ ಜೂನಿಯರ್​ ಕಾಲೇಜು ಬಳಿ ಸೋಮವಾರ ಸಂಜೆ ವಾಯು ವಿಹಾರಕ್ಕೆ ತೆರಳಿದ್ದಾಗ ದ್ವಿಚಕ್ರ ವಾಹನ ಡಿಕ್ಕಿಯಾಗಿ ಇಬ್ಬರು ನಿವೃತ್ತ ಉಪನ್ಯಾಸಕರು ಮೃತಪಟ್ಟಿದ್ದಾರೆ.

ಪಟ್ಟಣದ ನಿವಾಸಿಗಳಾದ ನಿವೃತ್ತ ಕನ್ನಡ ಉಪನ್ಯಾಸಕ ಕೆ.ಬಿ.ಮೋಹನ್​ (64), ನಿವೃತ್ತ ರಾಸಾಯನ ಶಾಸ್ತ್ರ ಉಪನ್ಯಾಸಕ ಲಕ್ಷಿ$್ಮ ನಾರಾಯಣ (62) ಮೃತರು.

ಪಟ್ಟಣದ ಜೂನಿಯರ್​ ಕಾಲೇಜು ಬಳಿ ವಾಯು ವಿಹಾರ ಮುಗಿಸಿ ವಾಪಸ್​ ಆಗುತ್ತಿದ್ದ ವೇಳೆ ಅತಿ ವೇಗವಾಗಿ ಹಾಗೂ ಅಜಾಕರಕತೆಯಿಂದ ಬಂದ ಬೈಕ್​ ಹಿಂಬದಿಯಿಂದ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಇಬ್ಬರಿಗೂ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net