ಕೋಲಾರ್ ಜಿಲ್ಲೆಗೆ ರೌಡಿಶೀಟರ್ ಗಡಿಪಾರು

deportation
Published on

ಹುಬ್ಬಳ್ಳಿ: ಕೇಶ್ವಾಪುರ ಪೊಲೀಸ್ ಠಾಣೆಯ ರೌಡಿಶೀಟರ್ ಪಟ್ಟಿಯಲ್ಲದ್ದ ಇಲ್ಲಿನ ನಾಗಶೆಟ್ಟಿಕೊಪ್ಪದ ಅಲ್ತಾಫ್ ಮಹಮ್ಮದ್ ಅಲಿ ಬೇಪಾರಿ ನದಾಫ್ ಎಂಬಾತನನ್ನು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.

ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಕೊಲೆ, ಬಡ್ಡಿ ವ್ಯವಹಾರ, ಅಮಾಯಕ ಜನರಿಗೆ ಜೀವ ಬೆದರಿಕೆ ಹಾಕುವುದು, ಕೊಲೆ ಯತ್ನ ಸೇರಿ ಇತರ ಪ್ರಕರಣಗಳು ಅಲ್ತಾಫ್ ಮೇಲೆ ದಾಖಲಾಗಿದ್ದವು. ಕೆಲ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ಶಿಕ್ಷೆಯಾಗಿದ್ದರೂ ಅಪರಾಧಿಕ ಪ್ರವೃತ್ತಿ ಮುಂದುವರಿಸಿದ್ದ. ಕಾನೂನಿನ ಭಯವಿಲ್ಲದೆ ಮಾರಕಾಸ್ತ್ರ ಇಟ್ಟುಕೊಂಡು ತಿರುಗಾಡುತ್ತಿದ್ದ. ಸಮಾಜದ ಸ್ವಾಸ್ಥ್ಯ ಹಾಳು ಮಾಡಿ ಅಭದ್ರತೆ ವಾತಾವರಣ ಸೃಷ್ಟಿಸುತ್ತಿರುವುದು ಹು-ಧಾ ಪೊಲೀಸ್ ಆಯುಕ್ತಾಲಯಕ್ಕೆ ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಅ. 19ರಿಂದ 6 ತಿಂಗಳವರೆಗೆ ಗಡಿಪಾರು ಮಾಡಲಾಗಿದೆ.

ಈ ರೌಡಿಶೀಟರ್​ಗೆ ಸೂಕ್ತ ಶಿಕ್ಷೆ ನೀಡುವ ನಿಟ್ಟಿನಲ್ಲಿ ಗಡಿಪಾರು ಮಾಡಲಾಗಿದೆ. ಇಂತಹ ಅಪರಾಧಿಕ ಚಟುವಟಿಕೆಗಳಲ್ಲಿ ತೊಡಗಿ ಸಾರ್ವಜನಿಕ ಶಾಂತಿ-ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಇತರರಿಗೂ ಕಠಿಣ ಕ್ರಮ ಕೈಗೂಳ್ಳುವ ಎಚ್ಚರಿಕೆಯ ಸಂದೇಶವನ್ನು ಆಯುಕ್ತಾಲಯ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net