ಬೀದರ್‌ಗೆ ರೌಡಿ ಶೀಟರ್ ಗಡಿಪಾರು

crime
Published on

ಗುಂಡ್ಲುಪೇಟೆ: ತಾಲೂಕಿನ ವಣಕನಪುರ ಗ್ರಾಮದ ರೌಡಿ ಶೀಟರ್ ಸಿದ್ದರಾಜು ಎಂಬಾತನನ್ನು ಬೀದರ್‌ಗೆ ಗಡಿಪಾರು ಮಾಡಿ ಜಿಲ್ಲಾಧಿಕಾರಿ ಸೋಮವಾರ ಆದೇಶ ಹೊರಡಿಸಿದ್ದಾರೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಶಾಂತಿ ಭಂಗ ಸೇರಿದಂತೆ ನಾನಾ ಪ್ರಕರಣಗಳು ದಾಖಲಾಗಿವೆ. ಚುನಾವಣಾ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಗಡಿಪಾರು ಮಾಡಲು ಪೊಲೀಸರು ಶಿಫಾರಸು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈತನನ್ನು ಬೀದರ್‌ಗೆ ಗಡಿಪಾರು ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net