ಕೊಲೆ ಆರೋಪಿಯ ಮೇಲೇ ಕೊಲೆ ಯತ್ನ; ಬಿಜೆಪಿ ಕಾರ್ಯಕರ್ತನ ಕೊಲೆ ಆರೋಪಿ ಪಿಂಕಿ ನವಾಜ್​ಗೆ ಗಂಭೀರ ಗಾಯ..

Murder attempt
ಅಪರಾಧ ನಡೆದ ಸ್ಥಳದಲ್ಲಿ ಪೊಲೀಸರಿಂದ ಪರಿಶೀಲನೆ
Published on

ಮಂಗಳೂರು: ಕೊಲೆ ಆರೋಪಿಯನ್ನೇ ಕೊಲೆ ಮಾಡಲು ಯತ್ನಿಸಿ ಗ್ಯಾಂಗ್​ವೊಂದು ವಿಫಲಗೊಂಡಿರುವ ಪ್ರಕರಣ ಕರಾವಳಿಯಲ್ಲಿ ನಡೆದಿದೆ. ಬಿಜೆಪಿ ಕಾರ್ಯಕರ್ತ ದೀಪಕ್​ ಕೊಲೆ ಆರೋಪ ಎದುರಿಸುತ್ತಿರುವ ಪಿಂಕಿ ನವಾಜ್​ ಎಂಬಾತನ ಮೇಲೆ ಇನ್ನೊಂದು ಗ್ಯಾಂಗ್ ದಾಳಿ ನಡೆಸಿದ್ದು, ನವಾಜ್ ಗಾಯಗೊಂಡಿದ್ದಾನೆ.

ಮಂಗಳೂರು ಹೊರವಲಯದ ಸುರತ್ಕಲ್​ನ ಕಾಟಿಪಳ್ಳ ಸೆಕೆಂಡ್ ಬ್ಲಾಕ್ ಬಳಿ ಈ ದಾಳಿ ನಡೆದಿದ್ದು, ಗಂಭೀರ ಗಾಯಗೊಂಡಿರುವ ನವಾಜ್​ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ಬಂದಿದ್ದ ಆರು ಜನರ ತಂಡ ಈ ದಾಳಿ ನಡೆಸಿ ಪರಾರಿಯಾಗಿದ್ದು, ಸುರತ್ಕಲ್ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಗಾಯಗೊಂಡಿರುವ ಕೊಲೆ ಆರೋಪಿ ಪಿಂಕಿ ನವಾಜ್​ ತನ್ನ ಕೊಲೆ ಯತ್ನದ ಬಗ್ಗೆ ಮತ್ತೊಂದು ಗ್ಯಾಂಗ್ ವಿರುದ್ಧ ಆರೋಪ ಮಾಡಿದ್ದಾನೆ. ಶಾಕಿಬ್ ಅಲಿಯಾಸ್​ ಶಾಬು ಎಂಬಾತನ ಗ್ಯಾಂಗ್​ನಿಂದ ಈ ದಾಳಿ ನಡೆದಿದೆ ಎಂದು ನವಾಜ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪಿಂಕಿ ನವಾಜ್​ ಇತ್ತೀಚೆಗೆ ಈ ಗ್ಯಾಂಗ್ ಜೊತೆ ಮನಸ್ತಾಪಗೊಂಡಿದ್ದ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net