ಸಾಲು ಸಾಲು ರಜೆ, ಒಂದು ದಿನ ಮೊದಲೇ ಕಚೇರಿಗಳಿಗೆ ಅಧಿಕಾರಿಗಳ ಗೈರು

11CBP2DCoffice-1.jpg
Published on

ಚಿಕ್ಕಬಳ್ಳಾಪುರ: ಸಾಲು ರಜೆ ಹಿನ್ನೆಲೆಯಲ್ಲಿ ಜಿಲ್ಲಾ, ತಾಲೂಕು ಮಟ್ಟದ ಸರ್ಕಾರಿ ಕಚೇರಿಗಳಲ್ಲಿ ಶುಕ್ರವಾರ ಬಹುತೇಕ ಅಧಿಕಾರಿಗಳು ಮತ್ತು ಗೈರಾಗಿರುವುದು ಕಂಡು ಬಂತು.
ಏ.12 ಎರಡನೇ ಶನಿವಾರ, ಏ.13 ಭಾನುವಾರ, ಏ.14 ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್ ಜಯಂತಿ. ಹೀಗೆ ಸಾಲು ರಜೆ ಹಿನ್ನೆಲೆ ಇದೆ. ಇದರಿಂದ ಕೆಲವರು ಗುರುವಾರದಿಂದಲೇ ರಜೆಯನ್ನು ಹಾಕಿ ಹೊರಟಿದ್ದು ಶುಕ್ರವಾರ ಹೆಚ್ಚಿನ ಪ್ರಮಾಣದಲ್ಲಿ ಗೈರು ಕಂಡು ಬಂತು. ಇದಕ್ಕೆ ಜಿಲ್ಲಾಡಳಿತ ಭವನ, ಜಿ.ಪಂ, ಜಿಲ್ಲಾ ಮತ್ತು ತಾಲೂಕು ಮಟ್ಟದ ಕಚೇರಿಗಳು ಸಿಬ್ಬಂದಿ ಕೊರತೆಗೆ ಕಲರವ ರಹಿತ ವಾತಾವರಣದಲ್ಲಿರುವಂತಿದ್ದವು. ಹೊರ ಗುತ್ತಿಗೆ ನೌಕರರು, ಇತರ ಅಧೀನ ಸಿಬ್ಬಂದಿ ಮಾತ್ರ ಇದ್ದು ಬೆರಳೆಣಿಕೆಯಲ್ಲಿ ಬಂದ ಜನರಿಗೆ ಆಡಳಿತಾತ್ಮಕ ಸೇವೆ ಹಾಗೂ ಸೌಲಭ್ಯಕ್ಕಾಗಿ ಮಂಗಳವಾರ ಬರಲು ಹೇಳಿ ಸಾಗ ಹಾಕಿದರು. ತುರ್ತು ಕೆಲಸಗಳ ನಿರ್ವಹಣೆಗೆ ಮಾತ್ರ ಕಚೇರಿ ಸೀಮಿತವಾಗಿತ್ತು. ಅನೇಕರು ಕಚೇರಿಯಲ್ಲಿ ಆರಾಮಾಗಿ ಕುಳಿತು ಕಾಲ ಕಳೆದರು. ಒತ್ತಡವನ್ನು ಬಿಟ್ಟು ಸಹೋದ್ಯೋಗಿಗಳೊಂದಿಗೆ ಮಾತುಕತೆಯಲ್ಲಿ ತೊಡಗಿದರು. ಮಧ್ಯಾಹ್ನದ ವೇಳೆಗೆ ಜವಾನರಿಗೆ ಬಾಗಿಲು ಹಾಕಿಕೊಂಡು ಹೋಗುವ ಜವಾಬ್ದಾರಿಯನ್ನು ವಹಿಸಿ, ಹೊರಟು ಹೋಗುವಂತಹ ಬುದ್ದಿವಂತಿಕೆಯನ್ನು ಪ್ರದರ್ಶಿಸಲಾಯಿತು.

*ಜನರ ಪ್ರಮಾಣ ಇಳಿಕೆ
ಜಿಲ್ಲಾಡಳಿತ ಭವನ ಹಾಗೂ ತಾಲೂಕು ಕಚೇರಿಗಳು ಸೇರಿದಂತೆ ಸದಾ ಜನಸಂದಣಿಯಿಂದ ಕೂಡಿರುತ್ತವೆ. ಬೆಳಿಗ್ಗೆಯಿಂದ ಸಂಜೆಯವರೆಗೆ ನಿರಂತರವಾಗಿ ಸಾರ್ವಜನಿಕರು ಬಂದು ಹೋಗುತ್ತಿರುತ್ತಾರೆ. ಹಾಗೆಯೇ ಸಿಬ್ಬಂದಿ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಆದರೆ, ಶುಕ್ರವಾರ ಮಾತ್ರ ಜನರ ಪ್ರಮಾಣ ತುಂಬಾ ಕಡಿಮೆ ಇತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net