ಗಜೇಂದ್ರಗಡ ಸುತ್ತ ಸಡಗರದ ರೊಟ್ಟಿ ಪಂಚಮಿ

19 GJD-1
ಗಜೇಂದ್ರಗಡ ಪಟ್ಟಣದ ಗೊಲ್ಲರ ಓಣಿಯಲ್ಲಿ ಶನಿವಾರ ರೊಟ್ಟಿ ಹಬ್ಬದಂದು ಚಿಣ್ಣರು ಪರಸ್ಪರ ರೊಟ್ಟಿ ವಿನಿಮಯ ಮಾಡಿಕೊಂಡರು.
Published on

ಗಜೇಂದ್ರಗಡ: ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ನಾಗರ ಪಂಚಮಿ ಮುನ್ನಾ ದಿನವಾದ ಶನಿವಾರ ರೊಟ್ಟಿ ಪಂಚಮಿಯನ್ನು ಮಹಿಳೆಯರು ಸಂತಸದಿಂದ ಆಚರಿಸಿದರು. ರೊಟ್ಟಿ, ವಿವಿಧ ತರಕಾರಿ ಹಾಗೂ ಕಾಳುಪಲ್ಯಯನ್ನು ಬಂಧುಗಳು, ನೆರೆ ಮನೆಯವರೊಂದಿಗೆ ಹಂಚಿಕೊಳ್ಳುವುದು ಈ ಹಬ್ಬದ ವಿಶೇಷ. ನಾಗ ಪಂಚಮಿಯ ಹಿನ್ನೆಲೆ ಬೆಳಗ್ಗೆ ಮನೆ ಶುದ್ಧಗೊಳಿಸಿ ಅಭ್ಯಂಗ ಸ್ನಾನ ಮಾಡಿ, ಅಂಗಳದಲ್ಲಿ ಬಣ್ಣದ ರಂಗೋಲಿ ಬಿಡಿಸಿ ಅಲಂಕರಿಸಿದ್ದರು. ಎಲ್ಲರ ಮನೆಗಳಲ್ಲಿ ಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ಮೊಸರು ಚಟ್ನಿ, ಶೇಂಗಾ ಚಟ್ನಿ ಹೀಗೆ ವಿವಿಧ ಬಗೆಯ ಖಾದ್ಯ ತಯಾರಿಸಿ ಅಕ್ಕಪಕ್ಕದ ಮನೆಯವರೊಂದಿಗೆ ವಿನಿಮಯ ಮಾಡಿಕೊಂಡರು. ಹೊಸದಾಗಿ ಮದುವೆಯಾದ ಹೆಂಗಳೆಯರು ತವರು ಮನೆಗೆ ಆಗಮಿಸಿ ಕುಟುಂಬದವರೊಂದಿಗೆ ಭೋಜನ ಸವಿದು ರೊಟ್ಟಿ ಪಂಚಮಿಯನ್ನು ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net