ರೊಟ್ಟಿ ಮುಟಗಿ ಊಟ ಸವೆದ ಕೈ ಅಭ್ಯರ್ಥಿ

Rotti Mutagi is a candidate for a worn-out meal
ಚುನಾವಣೆ ಪ್ರಚಾರದ ಮಧ್ಯೆ ಬಾಗಲಕೋಟೆ ವಿದ್ಯಾಗಿರಿಯ ಅನ್ನಪೂರ್ಣೇಶ್ವರಿ ಊಟದ ಮನೆಯಲ್ಲಿ ಗ್ರಾಹಕರ ಜೊತೆ ಕುಳಿತು ರೊಟ್ಟಿ ಮುಟಗಿ ಊಟ ಸವೆದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ.
Published on

ಬಾಗಲಕೋಟೆ: ದಾಖಲೆ ಬಿಸಿಲಿನಲ್ಲಿ ಮನೆಯಿಂದ ಹೊರಗೆ ಬರಲು ಜನರು ಬೆದರುತ್ತಿದ್ದಾರೆ. ಆದರೆ, ಚುನಾವಣೆ ಸಮಯ. ಅಭ್ಯರ್ಥಿಗಳಿಗೆ ಅಲೆದಾಟ ಬಿಡುಗಡೆ ಇಲ್ಲದ್ದು. ಹೀಗೆ ರಣಬಿಸಿಲಿನಲ್ಲಿ ಪ್ರಚಾರ ಕೈಗೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಮಧ್ಯಾಹ್ನ ಬಾಗಲಕೋಟೆ ಸ್ಪೇಷಲ್ ರೊಟ್ಟಿ ಮುಟಗಿ ಊಟಕ್ಕೆ ಮೊರೆ ಹೋದರು.

ಶುಕ್ರವಾರ ಬೀಳಗಿ ಪ್ರಚಾರ ಮುಗಿಸಿಕೊಂಡು ಬಾಗಲಕೋಟೆಗೆ ಆಗಮಿಸಿದ ಸಂಯುಕ್ತ ಪಾಟೀಲ, ವಿದ್ಯಾಗಿರಿಯ ಅನ್ನಪೂರ್ಣೇಶ್ವರಿ ಊಟದ ಮನೆಯ ಬಿಸಿ ಬಿಸಿ ರೊಟ್ಟಿ ಮುಟಗಿ ಊಟಕ್ಕೆ ತೆರಳಿದರು. ಖಾನಾವಳಿಯಲ್ಲಿ ಗ್ರಾಹಕರ ಜೊತೆ ಕುಳಿತು ರೊಟ್ಟಿ ಮುಟಗಿ ರುಚಿಗೆ ಫಿದಾ ಆದರು. ಎಷ್ಟೊಂದು ರುಚಿ ಮಾಡಿದ್ದೀರಲ್ಲ. ಬಹಳ ಜನ ನಿಮ್ಮ ರೊಟ್ಟಿ ಮುಟಗಿ ಬಗ್ಗೆ ಹೇಳಿದ್ದರು. ಅದಕ್ಕೆ ನಿಮ್ಮ ಊಟದ ಮನೆಗೆ ಬಂದೆ ಎಂದರು.

ಇದೇ ವೇಳೆ ಆ ಖಾನಾವಳಿ ಮಾಲೀಕಳು ಇತ್ತೀಚಿಗೆ ತಮ್ಮ ಪುತ್ರ ಅಗಲಿದ್ದನ್ನು ಅವರಿಗೆ ಹೇಳಿಕೊಂಡು ಬಾವುಕರಾದರು. ಹೋಟೆಲ್ ಆತನೇ ನಡೆಸುತ್ತಿದ್ದ, ಆತ ಅಗಲಿದ ಬಳಿಕ ನಾವು ಮಾಡುತ್ತಿದ್ದೇವೆ ಎಂದು ಕಣ್ಣು ತುಂಬಿಕೊಂಡರು. ಆಗ ತಾಯಿಯನ್ನು ಸಂಯುಕ್ತ ಪಾಟೀಲ ಸಮಾಧಾನ ಪಡಿಸಿದರು. ರೊಟ್ಟಿ ಮುಟಗಿ, ಬೆಂಡಿಕಾಯಿ ಪಲ್ಲೆ, ಶೇಂಗಾ ಚಟ್ನಿ, ಮೊಸರು, ಶೇಂಗಾ ಹೋಳಿಗೆ, ಅನ್ನ ಸಾಂಬರ್ ಸವೆದು ಊಟದ ರುಚಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net