ಪ್ರಗತಿಪರ ರೈತರಿಗಾಗಿ ‘ಇಂಟೆಲಿಜೆಂಟ್ ರೋಟವೇಟರ್’ಅವಿಷ್ಕಾರ

madhindra rotovetar
madhindra rotovetar
Published on

ಮಹೀಂದ್ರಾದ ಕ್ರಾಂತಿಕಾರಕ ಹೆಜ್ಜೆ

ಬ್ಲೂಟೂತ್ ತಂತ್ರಜ್ಞಾನ ಅಳವಡಿಕೆ


  • ಶಿವರಾಜ ಎಂ ಚಂಢೀಗಢ
  • ವಿಶ್ವದ ಅತಿದೊಡ್ಡ ಟ್ರ್ಯಾಕ್ಟರ್ ತಯಾರಿಕ ಕಂಪನಿ ಎಂಬ ಹೆಗ್ಗಳಿಕೆ ಪಡೆದಿರುವ ಮಹೀಂದ್ರಾ ಫಾರ್ಮ್ ಈಕ್ವಿಪ್‌ಮೆಂಟ್ ವಿಭಾಗವು ಉನ್ನತ ಶ್ರೇಣಿಯ ರೋಟವೇಟರ್‌ಗಳ ತಯಾರಿಕೆ ಮೂಲಕ ಆಧುನಿಕ ಕೃಷಿ ಕ್ಷೇತ್ರಕ್ಕೆ ನವೀನ ತಂತ್ರಜ್ಞಾನದ ಉಳುಮೆ ಸಾಧನಗಳನ್ನು ಕೊಡುಗೆಯಾಗಿ ನೀಡಿದೆ.ಪ್ರಗತಿಪರ ರೈತರಿಗಾಗಿ ಈ ’ಇಂಟೆಲಿಜೆಂಟ್ ರೋಟವೇಟರ್’ ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಭಾರತದಲ್ಲಿ ರೋಟವೇಟರ್ ತಂತ್ರಜ್ಞಾನ ಬಳಸಿಕೊಂಡು ಎಲ್ಲ ಬಗೆಯ ಬೆಳೆಗಳಿಗೆ ಮತ್ತು ಮಣ್ಣಿನ ವಿಧಗಳಿಗೆ ಅನುಗುಣವಾಗಿ ವ್ಯವಸಾಯಕ್ಕೆ ಭೂಮಿ ಹದಗೊಳಿಸುವ ಪ್ರಕ್ರಿಯೆಯಲ್ಲಿ ಕ್ರಾಂತಿಕಾರ ಹೆಜ್ಜೆ ಇಟ್ಟಿದೆ.
    ದೀರ್ಘ ಬಾಳಿಕೆ ಮತ್ತು ವಿಶ್ವಾಸಾರ್ಹತೆ: ದೀರ್ಘ ಬಾಳಿಕೆ ಮತ್ತು ವಿಶ್ವಾಸಾರ್ಹ ರೋಟವೇಟರ್‌ಗಳನ್ನು ಉತ್ಪಾದಿಸಿ ವ್ಯವಸಾಯಕ್ಕೆ ಭೂಮಿ ಹದಗೊಳಿಸುವ ಸುಲಭ ಪ್ರಕ್ರಿಯೆಯ ಸದುದ್ದೇಶದೊಂದಿಗೆ ಮಹೀಂದ್ರಾ ಕಂಪನಿ ರೈತರ ಮಿತ್ರ ಎನಿಸಿದೆ. ಹಗುರ ರೋಟವೇಟರ್‌ಗಳಿಂದ ಹಿಡಿದು ಅತೀಭಾರದ ರೋಟವೇರ್‌ಗಳವರೆಗೆ ವಿವಿಧ ಕೃಷಿ ಚಟುವಟಿಕೆಗಳಿಗೆ ಹೊಂದಿಕೊಳ್ಳುವ ವಿನ್ಯಾಸದೊಂದಿಗೆ ಉಳುಮೆ ಸಾಧನಗಳನ್ನು ಅಭಿವೃದ್ಧಿಪಡಿಸಿದೆ. ಭಾರತದಲ್ಲಿ ತಯಾರಿಸಲಾದ ಮಹೀಂದ್ರಾ ರೋಟವೇಟರ್‌ಗಳು ಮಹೀಂದ್ರಾದ ಎಲ್ಲ ನೆಟ್‌ವರ್ಕ್ ಗಳಲ್ಲಿ ಸುಲಭ ಸಾಲಸೌಲಭ್ಯ, ವಾರಂಟಿ, ಸರ್ವೀಸ್ ಮತ್ತು ಬಿಡಿಭಾಗಗಳ ಜತೆ ದೊರೆಯುತ್ತದೆ.
    ನಭಾದ ಘಟಕದಲ್ಲಿ ಉತ್ಪಾದನೆ: ಮೇಡ್ ಇನ್ ಇಂಡಿಯಾ ಮಹೀಂದ್ರಾ ರೋಟವೇಟರ್‌ಗಳನ್ನು ಪಂಜಾಬ್‌ನ ನಭಾದಲ್ಲಿರುವ ಮಹೀಂದ್ರಾದ ಅತ್ಯುನ್ನತ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗುತ್ತದೆ.
    ಮಹೀಂದ್ರಾ ದೇಶದ ಅತಿ ದೊಡ್ಡ ರೋಟವೇಟರ್ ತಯಾರಕರಲ್ಲಿ ಅಗ್ರಸ್ಥಾನದಲ್ಲಿದ್ದು ಕಂಪನಿಯ ಹೊಸ ಶ್ರೇಣಿಯ ಉತ್ಪನ್ನಗಳನ್ನು ವಿಶ್ವದರ್ಜೆಯ ಮಾನದಂಡಗಳಿಗೆ ಅನುಗುಣವಾಗಿ ಪರೀಕ್ಷಿಸಿ ವಿನ್ಯಾಸಗೊಳಿಸಿದೆ. ದೇಶದ ಉದ್ದಗಲಕ್ಕೂ ವಿಭಿನ್ನ ಕೃಷಿ ಪದ್ಧತಿಗಳಲ್ಲಿಯೂ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುವ ಸಾಧನಗಳನ್ನು ಅಭಿವೃದ್ಧಿಪಡಿಸಿದೆ.
    ಪ್ರಮುಖ ಅನುಕೂಲಗಳೇನು? ಭೂಮಿ ಹದಗೊಳಿಸುವಲ್ಲಿ ಅಗತ್ಯವಿರುವ ಸಮಯ ಮತ್ತು ಶ್ರಮವನ್ನು ಮಹೀಂದ್ರಾ ರೋಟವೇಟರ್‌ಗಳು ಕಡಿಮೆ ಮಾಡುತ್ತವೆ. ಜತೆಗೆ ಅವುಗಳು ಬೀಜ ಬಿತ್ತುವ ಜಾಗದ ಗುಣಮಟ್ಟ ಹೆಚ್ಚಿಸುತ್ತವೆ. ಕಳೆ ನಿಯಂತ್ರಣದ ಜತೆಗೆ ಉಳಿಕೆ ಭಾಗಗಳನ್ನು ಉತ್ತಮವಾಗಿ ನಿರ್ವಹಣೆ ಮಾಡುತ್ತವೆ. ಮಣ್ಣಿನ ಭೌತಿಕ ಸ್ಥಿತಿಯನ್ನು ಸುಧಾರಣೆ ಮಾಡುತ್ತವೆ. 15 ರಿಂದ 70 ಎಚ್‌ಪಿವರೆಗೆ ಸಾಮರ್ಥ್ಯ ಹೊಂದಿರುವ ಟ್ರ್ಯಾಕ್ಟರ್‌ಗಳ ಜತೆಗೆ ಮತ್ತು ವಿವಿಧ ಮಣ್ಣಿನ ಸ್ಥಿತಿಗಳಿಗೆ ಹೊಂದಿಕೊಳ್ಳುತ್ತವೆ. ಕಡಿಮೆ ಇಂಧನ ಬಳಸುವಂತೆ ವಿನ್ಯಾಸಗೊಳಿಸಲಾಗಿದೆ ರೋಟವೇಟರ್‌ಗಳ ಬ್ಲೇಡ್‌ಗಳನ್ನು ವಿಶೇಷವಾದ ಉಕ್ಕಿನ ಮಿಶ್ರಲೋಹ ಬ್ರಾಂಡ್ ಆಗಿರುವ ‘ಬೋರೊ ಬ್ಲೇಡ್’ ಬಳಸಿಕೊಂಡು ತಯಾರಿಸಲಾಗುತ್ತದೆ. ಹಾಗಾಗಿ ಇದನ್ನು ಕಠಿಣವಾದ ಮಣ್ಣಿನ ಗದ್ದೆಯಲ್ಲಿ ಬಳಸಿದರೂ ದೀರ್ಘ ಕಾಲ ಬಾಳಿಕೆ ಬರುತ್ತದೆ. ಬ್ಲೂಟೂತ್ ತಂತ್ರಜ್ಞಾನದ ಸಹಾಯದಿಂದ ಕಾರ್ಯ ನಿರ್ವಹಿಸಬಹುದಾಗಿದೆ.
    ಆಧುನಿಕ ಕೃಷಿಗೆ ಪೂರಕ: ಕೃಷಿಯಲ್ಲಿ ಆಧುನಿಕತೆ ಹೆಚ್ಚುತ್ತಿದೆ ಇದಕ್ಕೆ ಅನುಗುಣವಾಗಿ ರೋಟವೇಟರ್‌ಗಳನ್ನು ಅಭಿವೃದ್ಧಿಪಡಿಸಿದ್ದು ಕೆಲಸದ ದಕ್ಷತೆಯಲ್ಲಿ ಇದರ ಸರಿಸಾಟಿ ಇಲ್ಲ ಎನ್ನಬಹುದು ಎಂದು ಮಹೀಂದ್ರಾ ಮಹೀಂದ್ರಾ ಲಿಮಿಟೆಡ್ ಫಾರ್ಮ್ ಈಕ್ವಿಪ್‌ಮೆಂಟ್ ಸೆಕ್ಟರ್ ಅಧ್ಯಕ್ಷ ಹೇಮಂತ್ ಸಿಕ್ಕಾ ಹೇಳಿದರು. ಪಂಜಾಬ್‌ನ ಚಂಡಿಗಢ ಖಾಸಗಿ ಹೋಟೆಲ್‌ನಲ್ಲಿ ವಿವಿಧ ರಾಜ್ಯದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.ಕೃಷಿ ಪದ್ಧತಿಗಳನ್ನು ಬದಲಿಸುವ ಮತ್ತು ಜೀವನ ಗುಣಮಟ್ಟ ಉತ್ಕೃಷ್ಟಗೊಳಿಸುವ ಉದ್ದೇಶದೊಂದಿಗೆ ಮಹೀಂದ್ರಾ ಸಂಸ್ಥೆ ದೇಶಕ್ಕೆ ಈ ಆಧುನಿಕ ರೋಟೋವೇಟರ್‌ಗಳನ್ನು ಪರಿಚಯಿಸಿದೆ ಎಂದು ತಿಳಿಸಿದರು.
    • ವ್ಯವಸಾಯಕ್ಕೆ ಭೂಮಿ ಹದಗೊಳಿಸುವ ಪ್ರಕ್ರಿಯೆಯಲ್ಲಿ ಸಮಯ ಮತ್ತು ಶ್ರಮವನ್ನು ಗಣನೀಯವಾಗಿ ತಗ್ಗಿಸುವ ಗುರಿಯೊಂದಿಗೆ ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದುಕಂಪನಿಯ ಮೆಶಿನರಿ ವಿಭಾಗದ ಬಿಸಿನೆಸ್ ಹೆಡ್ ಕೈರಾಸ್ ವಖಾರಿಯಾ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net