

ಗುಳೇದಗುಡ್ಡ: ಪಟ್ಟಣದಲ್ಲಿ ಗುರುಸಿದ್ಧೇಶ್ವರ ಬೃಹನ್ಮಠದ ಜಗದ್ಗುರು ಗುರುಸಿದ್ಧ ಪಟ್ಟದಾರ್ಯ ಮಹಾಸ್ವಾಮಿಗಳ 39ನೇ ಪುಣ್ಯಾರಾಧನೆ ಹಾಗೂ ಗುರುಬಸವ ದೇವರ ಪಟ್ಟಾಭಿಷೇಕ ಮಹೋತ್ಸವ ನಿಮಿತ್ತ ಮಹಿಳೆಯರಿಂದ ರೊಟ್ಟಿ ಜಾತ್ರೆ ಮೆರವಣಿಗೆ ನಡೆಯಿತು.
ಪಟ್ಟಣದ ಹೊಸಪೇಟೆ ಶ್ರೀಸಾಲೇಶ್ವರ ಕಲ್ಯಾಣ ಮಂಟಪದಿಂದ ಆರಂಭಗೊಂಡ ರೊಟ್ಟಿ ಜಾತ್ರೆ ಮೆರವಣಿಗೆ ಮರಡಿಮಠ, ಪವಾರ್ ಕ್ರಾಸ್, ಚುಂಗಿನ ಓಣಿ, ಅರಳಿಕಟ್ಟಿ, ಚೌಬಜಾರ, ಗಚ್ಚಿನಕಟ್ಟಿ, ಕಂಠಿಪೇಟೆ ಮೂಲಕ ಗುರುಸಿದ್ಧೇಶ್ವರ ಬೃಹನ್ಮಠಕ್ಕೆ ಬಂದು ತಲುಪಿತು.
ಪಟ್ಟಸಾಲಿ ನೇಕಾರ ಸಮಾಜ ಮಹಿಳಾ ಘಟಕದ ಅಧ್ಯಕ್ಷೆ ಗೌರಮ್ಮ ಕಲಬುರ್ಗಿ, ಉಪಾಧ್ಯಕ್ಷೆ ತಾರಾಮತಿ ರೋಜಿ, ಕಾರ್ಯದರ್ಶಿ ಗಿರಿಜಾ ಕಲ್ಯಾಣಿ, ದೀಪಾ ಉಂಕಿ, ಮೀನಾಕ್ಷಿ ಮದ್ದಾನಿ, ವೇದಾ, ಅನಿತಾ ಶಿರೋಳ, ಶಶಿಕಲಾ ಭಾವಿ, ನಾಗರತ್ನಾ ಎಣ್ಣಿ, ಸುವರ್ಣ ಲಂಡನ್ನವರ, ಅನಸುಯಾ ಅಲದಿ, ಭಾಗ್ಯಾ ಉದ್ನೂರ, ದ್ರಾಕ್ಷಾಯಣಿ ಗೊಬ್ಬಿ, ಮಾಲಾ ರಾಜನಾಳ, ನೇತ್ರಾ ತಾಂಡೂರ, ಕಲ್ಪನಾ ಹುಬ್ಬಳ್ಳಿ, ಶಿಲ್ಪಾ ಕಲಬುರ್ಗಿ, ಸಂಗೀತಾ ಕೆಲೂಡಿ, ಜಂಪವ್ವ ಕಲಬುರ್ಗಿ, ಅನ್ನಪೂರ್ಣ ಮದಕಟ್ಟಿ ಇದ್ದರು.