

ಬೆಳಗಾವಿ : ಇಲ್ಲಿನ ರೋಟರಿ ಕ್ಲಬ್ ಆಫ್ ಬೆಳಗಾವಿ ಸೆಂಟ್ರಲ್‌ನ ನೂತನ ಕಾರ್ಯಕಾರಣಿ ಸ್ಥಾಪನೆ ಸಮಾರಂಭ ಜುಲೈ 8 ರಂದು ಟಿಳಕವಾಡಿಯ ಇಂದ್ರಪ್ರಸ್ತ ನಗರದ ಓರಿಯಂಟಲ್ ಹೈಸ್ಕೂಲ್ ಹತ್ತಿರದ ತುಕಾರಾಂ ಸಭಾಂಗಣದಲ್ಲಿ ಜರುಗಲಿದೆ.
ಶನಿವಾರ ಸಂಜೆ 7ಕ್ಕೆ ಜರುಗುವ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷ ಮಂಜುನಾಥ ಆಳ್ವಾನಿ, ಕಾರ್ಯದರ್ಶಿ ಅಭಯ ಜೋಶಿ, ಖಜಾಂಚಿಯಾಗಿ ಸಂತೋಷ ಗವಳಿ, ಸ್ಥಾಪನಾ ಅಧಿಕಾರಿಯಾಗಿ ಡಾಕ್ಟರ್ ಲೆನಿ ಡಿಕೋಸ್ತಾ, ಜಿಲ್ಲಾ ಕಾರ್ಯದರ್ಶಿ, ಉಪ ಪ್ರಾಂತಪಾಲಕಿ ಶೀತಲ್ ಚಿಲ್ಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.