ಪೋಲಿಯೋ ಮುಕ್ತ ವಿಶ್ವ ಸ್ಥಾಪನೆಗಾಗಿ ರೋಟರಿ ಶ್ರಮ

HUN-OCT-25-2(ROTARY POLIO DAY)
ಹುಣಸೂರು ರೋಟರಿ ಸಂಸ್ಥೆ ವತಿಯಿಂದ ವಿಶ್ವ ಪೋಲಿಯೋ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಅರಿವು ಜಾಥಾಕ್ಕೆ ಡಾ.ಸರೋಜಿನಿ ವಿಕ್ರಂ ಚಾಲನೆ ನೀಡಿದರು. ಎಚ್.ಆರ್.ಕೃಷ್ಣಕುಮಾರ್, ಶ್ಯಾಮ್, ರಾಜಶೇಖರ್, ದೀಪಾ, ಹರೀಶ್, ಪ್ರಸನ್ನ ಮತ್ತು ವಿದ್ಯಾರ್ಥಿಗಳಿದ್ದರು.
Published on

ಹುಣಸೂರು: ಪೋಲಿಯೋ ಮುಕ್ತ ವಿಶ್ವ ಸ್ಥಾಪನೆಗಾಗಿ ರೋಟರಿ ಅಂತಾರಾಷ್ಟ್ರೀಯ ಸಂಸ್ಥೆ ಮೂರು ದಶಕಗಳಿಂದ ಅವಿರತವಾಗಿ ಶ್ರಮಿಸುತ್ತಿದೆ ಎಂದು ಹುಣಸೂರು ರೋಟರಿ ಸಂಸ್ಥೆಯ ಪಲ್ಸ್ ಪೋಲಿಯೋ ಅಧ್ಯಕ್ಷರಾದ ಡಾ.ಸರೋಜಿನಿ ವಿಕ್ರಂ ತಿಳಿಸಿದರು.

ಶುಕ್ರವಾರ ರೋಟರಿ ಸಂಸ್ಥೆ ಮತ್ತು ರೋಟರಿ ವಿದ್ಯಾಸಂಸ್ಥೆ ಸಹಯೋಗದಲ್ಲಿ ವಿಶ್ವ ಪೋಲಿಯೋ ದಿನಾಚರಣೆ ಅಂಗವಾಗಿ ಶನಿವಾರ ಆಯೋಜಿಸಿದ್ದ ಪೋಲಿಯೋ ಮುಕ್ತ ಭಾರತ ಅರಿವು ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರತಿಯೊಬ್ಬ ರೋಟರಿ ಸದಸ್ಯ ವಿಶ್ವದಲ್ಲಿ ಜನರನ್ನು ಕಾಡುತ್ತಿರುವ ಪೋಲಿಯೋ ನಿರ್ಮೂಲನೆಗೆ ತನ್ನದೇ ಆದ ಆರ್ಥಿಕ ಸಹಾಯವನ್ನು ನೀಡುತ್ತಿದ್ದಾನೆ. ಇಂದು ಭಾರತ ಪೋಲಿಯೋ ಮುಕ್ತ ದೇಶವಾಗಿ ಘೋಷಿಸಲ್ಪಟಿದೆ ಎಂದರೆ ಅದರ ಕೀರ್ತಿ ರೋಟರಿ ಸಂಸ್ಥೆಗೆ ಸಲ್ಲಬೇಕು. ಆದರೂ ನಮ್ಮ ಅಕ್ಕಪಕ್ಕದ ಮತ್ತು ವಿಶ್ವದ ಅಭಿವೃದ್ಧಿ ಹೊಂದದ ದೇಶಗಳಲ್ಲಿನ ಬಡತನ, ದಾರಿದ್ರ್ಯದ ಕಾರಣದಿಂದ ಅಲ್ಲಲ್ಲಿ ಪೋಲಿಯೋ ಕಾಣಿಸಿಕೊಳ್ಳುತ್ತಿದೆ. ಈ ಕುರಿತು ಜನರಲ್ಲಿ ಎಚ್ಚರಿಕೆ ಮೂಡಿಸುವ ಕಾರ್ಯವನ್ನು ರೋಟರಿ ಸಂಸ್ಥೆ ನಡೆಸಿದೆ ಎಂದರು.

ರೋಟರಿ ಅಧ್ಯಕ್ಷ ಎಚ್.ಆರ್.ಕೃಷ್ಣಕುಮಾರ್ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ರೊ.ಧರ್ಮಾಪುರ ಶ್ಯಾಮ್, ರೊ.ರಾಜಶೇಖರ್, ಮುಖ್ಯಶಿಕ್ಷಕಿ ದೀಪಾ, ಹರೀಶ್, ದೈಹಿಕ ಶಿಕ್ಷಣ ಶಿಕ್ಷಕ ಪ್ರಸನ್ನ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ನಗರದ ಸಂವಿಧಾನ ವೃತ್ತ, ಸೇತುವೆ ರಸ್ತೆ ಮತ್ತು ಎಸ್‌ಜೆ ರಸ್ತೆಯಲ್ಲಿ ಜಾಥಾ ನಡೆಸಿ ಅರಿವು ಮೂಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net