

ಶೃಂಗೇರಿ: ನಿಸ್ವಾರ್ಥ ಸೇವೆಯನ್ನು ತಮ್ಮ ಧ್ಯೇಯವಾಗಿರಿಸಿ ರೋಟರಿ ಸಂಸ್ಥೆ ಬದ್ಧತೆಯಿಂದ ಜನಸಾಮಾನ್ಯರ ಸೇವೆ ಮಾಡುತ್ತಿದ್ದು, 24 ವರ್ಷಗಳಿಂದ ಸಮಾಜದ ಉನ್ನತಿಗಾಗಿ ಪರಿಶ್ರಮಿಸುತ್ತಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಈಡಿಗರ ಸಮುದಾಯ ಭವನದಲ್ಲಿ ರೋಟರಿ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, ರೋಟರಿ ಆರೋಗ್ಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ತನ್ನದೇ ಛಾಪು ಮೂಡಿಸಿದೆ. ಉಚಿತ ಆರೋಗ್ಯ ಶಿಬಿರ, ಕಾನೂನು ಅರಿವು, ಶಾಲಾ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ, ಪರಿಸರ ಕಾಳಜಿ ಮುಂತಾದ ಕಾರ್ಯಗಳಿಂದ ಜನಮಾನಸದಲ್ಲಿ ಶಾಶ್ವತ ಸ್ಥಾನಗಳಿಸಿದೆ. ಎಂದರು.
ಮಾಜಿ ರೋಟರಿ ಜಿಲ್ಲಾ ಗರ್ವನರ್ ಅಭಿನಂದನ್.ಎ.ಶೆಟ್ಟಿ ಮಾತನಾಡಿ, ಪೋಲಿಯೋ ಮುಕ್ತ ಭಾರತಕ್ಕೆ ರೋಟರಿ ಸಂಸ್ಥೆ ನೀಡಿದ ಕೊಡುಗೆ ಅನನ್ಯ. ಮಾನವೀಯ ಮೌಲ್ಯಗಳಿಂದ ಸಂಸ್ಥೆ ನಿರಂತರ ಕಾರ್ಯನಿರ್ವಹಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪು ಪರಿಮೂಡಿಸಿದೆ. ರೋಟರಿ ೌಂಡೇಷನ್ ಮೂಲಕ ಶೈಕ್ಷಣಿಕ, ಸಾಮಾಜಿಕ ಕಾರ್ಯಗಳಿಗೆ ಸಹಕಾರ ನೀಡುತ್ತಿದೆ ಎಂದರು.
ಕಾ ವಲಯ-6ರ ಸೇನಾನಿ ಮಹೇಶ್,ಕಾರ್ಯದರ್ಶಿ ಪ್ರಿಯದರ್ಶಿನಿ,ನಿಕಟಪೂರ್ವ ಅಧ್ಯಕ್ಷ ನಾಗೇಶ್,ಮಾಜಿ ಕಾರ್ಯದರ್ಶಿ ಸುರೇಶ್, ಲೇಖಕಿ ದೀಪಾ ಹಿರೇಗುತ್ತಿ, ಇನ್ನರ್‌ವ್ಹೀಲ್ ಅಧ್ಯಕ್ಷೆ ಮಂಜುಳಾ, ಕಾರ್ಯದರ್ಶಿ ರತ್ನಾನಾಗೇಶ್ ಉಪಸ್ಥಿತರಿದ್ದರು.