

ಜಮಖಂಡಿ: ಪೊಲೀಯೋ ಮುಕ್ತ ಮಾಡುವಲ್ಲಿ ರೋಟರಿ ಸಂಸ್ಥೆ ಕೊಡುಗೆ ಬಹಳಷ್ಟಿದೆ ಎಂದು ಗೌರ್ನರ್ ಅವಿನಾಶ ಪೋದಾರ ಹೇಳಿದರು.
ನಗರದ ಪಂಚಮಸಾಲಿ ಕಲ್ಯಾಣ ಮಂಟಪದಲ್ಲಿ ನಡೆದ ರೋಟರಿ ಮತ್ತು ಇನ್ನರ್‌ವೀಲ್ ಸಂಸ್ಥೆಯ 2024-25ನೇ ಸಾಲಿನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರೋಟರಿ ಸಂಸ್ಥೆಯು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಅಧ್ಯಕ್ಷ ಹುದ್ದೆ ಪಡೆದು ಕೊಂಡವರು ತಮ್ಮ ಆಡಳಿತಾವಧಿಯಲ್ಲಿ ಎಲ್ಲ ಸದಸ್ಯರ ಮನಗೆದ್ದು ಸಾಮಾಜಿಕವಾಗಿ ಒಳ್ಳೆಯ ಕೆಲಸಗಳನ್ನು ಮಾಡಬೇಕಾಗುತ್ತದೆ. ತಮ್ಮ ಅಧಿಕಾರಾದ ಅವಧಿಯಲ್ಲಿ ಒಳ್ಳೆಯ ಕೆಲಸ ಮಾಡಬೇಕು. ಮನಸು ದೊಡ್ಡದು ಇರಬೇಕು. ಯಾವುದೇ ಕಾರಣಕ್ಕೂ ತಪ್ಪುಗಳನ್ನು ಮಾಡಬಾರದು. ನಮಗೆ ಸಮಾಧಾನ, ತೃಪ್ತಿ ತರುವ ಕೆಲಸ ಮಾಡಬೇಕು ಎಂದರು.
ರೋಟರಿ ಸಂಸ್ಥೆ ನೂತನ ಅಧ್ಯಕ್ಷ ಕಿರಣ ದೇಸಾಯಿ ಅಧಿಕಾರ ಸ್ವೀಕರಿಸಿ ಮಾತನಾಡಿ, ಸಮಾಜದಲ್ಲಿ ಒಳ್ಳೆಯದನ್ನು ಮಾಡಬೇಕೆ ಹೊರತು ಕೆಟ್ಟದ್ದನ್ನು ಮಾಡಬಾರದು. ನಮಗೆ ಕೊಟ್ಟ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕು. ಬನಹಟ್ಟಿ, ರಬಕವಿ ರೋಟರಿ ಸಂಸ್ಥೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಿರಿಯರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತೇನೆ. ಡೆಂೆ, ಕ್ಯಾನ್ಸರ್ ಹೀಗೆ ಆರೋಗ್ಯದ ಬಗ್ಗೆ ರೈತರ ಕುರಿತು ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಶಿಬಿರ ಆಯೋಜಿಸುವ ಗುರಿ ಹೊಂದಿದ್ದೇನೆ ಎಂದರು.
ಡಾ. ಸುಖನ್ಯಾ ಕಲೂತಿ, ಆರ್.ಪಿ. ನ್ಯಾಮಗೌಡ ಅಥಿತಿಗಳನ್ನು ಪರಿಚಯಿಸಿದರು. ಎಸ್.ವೈ. ಬಿರಾದಾರ ವರದಿ ವಾಚನ ಮಾಡಿದರು.
ಬಸವರಾಜ ಆಲಗೂರ ಮಾತನಾಡಿದರು. ಡಾ. ಅಶ್ವಿನಿ ಪೂಜಾರಿ ವರದಿ ವಾಚಿಸಿದರು. ಶ್ರೀಧರ ಕಾಖಂಡಕಿ, ರಾಜು ಕುವಳ್ಳಿ ಪರಿಚಯಿಸಿದರು. ನೂತನವಾಗಿ ಉಪಾಧ್ಯಕ್ಷರಾಗಿ ಮುತ್ತುರಾಜ ಅತ್ತೇಪ್ಪನ್ನರ, ಕಾರ್ಯದರ್ಶಿ ಚಂದ್ರಗುಪ್ತ ಬೆಳಗಲಿ, ಸಹ ಕಾರ್ಯದರ್ಶಿ ಮಲ್ಲಪ್ಪ ಬೂಜರುಕ, ಖಜಾಂಚಿ ಪ್ರಕಾಶ ಶಿಂಧೆ, ಸಹ ಖಜಾಂಚಿ ಶಂಕರ ಪಟ್ಟಣಶೆಟ್ಟಿ, ಶೀತಲ ನ್ಯಾಮಗೌಡ ಅಧಿಕಾರ ಸ್ವೀಕರಿಸಿದರು. ಅರ್ಚನಾ ಕಾಖಂಡಕಿ ಪರಿಚಯಿಸಿದರು. ಇನ್ನರ್‌ವೀಲ್ ಸಂಸ್ಥೆಯ ನೂತನ ಅಧ್ಯಕ್ಷೆ ಅಲಕಾ ಮಾಳಗಿ, ಕಾರ್ಯದರ್ಶಿ ಗಿರೀಜಾ ಮೈತ್ರಿ, ಖಜಾಂಚಿ ಮೇಘಾ ಮಹಾಬಳಶೆಟ್ಟಿ ಅಧಿಕಾರ ಸ್ವೀಕರಿಸಿದರು.
ಡಾ. ಅಶ್ವಿನಿ ಪೂಜಾರಿ, ರೂಪಾ ಪೋದಾರ, ಬೆಳಗಾವಿ ಶ್ರೀಹರ್ಷ ಷಾ ಮಾತನಾಡಿದರು. ಆಶಾದೇವಿ ಗುಡಗುಂಟಿ, ರವೀಂದ್ರ ಗೌಳಿ ಇದ್ದರು. ಡಾ. ಮಾಳೇಶ ಪೂಜಾರಿ, ಮಾಹಾನಂದಾ ಧರೀಗೌಡರ, ಡಾ. ಜೋತಿ ದೇವರಡ್ಡಿ ನಿರೂಪಿಸಿದರು. ಮಲ್ಲಪ್ಪ ಬೂಜರೂಕ ವಂದಿಸಿದರು.