

ಮಂಗಳೂರು : ರೋಟರಿ ಇಂಟರ್ ನ್ಯಾಶನಲ್ ವಲಯ 3181ರ ಇದರ ನಾಯಕತ್ವ ತರಬೇತಿ ಕಾರ್ಯಾಗಾರ ಮತ್ತು ಪ್ರಶಸ್ತಿ ವಿತರಣಾ ಸಮಾರಂಭ ರೋಟರಿ ಕ್ಲಬ್ ಮಂಗಳೂರು ಉತ್ತರ ಸಹಯೋಗದಲ್ಲಿ ಪಿಲಿಕುಳ ನಿಸರ್ಗಧಾಮದಲ್ಲಿ ನಡೆಯಿತು. ಮೈಸೂರು, ಸುಳ್ಯ,
ಪುತ್ತೂರು, ಮೂಡುಬಿದಿರೆ, ಸುರತ್ಕಲ್ ಹಾಗೂ ಮಂಗಳೂರನಿಂದ 101 ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ರೋಟರಿ ಜಿಲ್ಲಾ ಗವರ್ನರ್ ವಿಕ್ರಮ್ದತ್ತ ಅವರು ಕಾರ್ಯಾಗಾರ ಉದ್ಘಾಟಿಸಿ ರೋಟರಿ ಸಮುದಾಯದ ಸೇವೆಗಳನ್ನು ವಿವರಿಸಿದರು. ರೋಟರಿ ಜಿಲ್ಲಾ ಆರ್‌ವೈಎಲ್‌ಎ ಸಮಿತಿ ಅಧ್ಯಕ್ಷ ಡಾ.ಕೆ.ಇ.ಪ್ರಕಾಶ್ ಮೂರು ದಿನಗಳ ಕಾರ್ಯಾಗಾರದ ಉದ್ದೇಶ ಮತ್ತು ಕಾರ್ಯಸೂಚಿ
ಮಂಡಿಸಿದರು. ಡಾ. ಮಾಲಿನಿ ಹೆಬ್ಬಾರ್ ನಾಯಕತ್ವ ವಿಷಯದ ಕುರಿತು ಮಾತನಾಡಿದರು. ಮೋಹನ್ ನಾಯರ್ ಸ್ವಾಗತಿಸಿ,ಡಾ.ಶಿವಪ್ರಸಾದ ವಂದಿಸಿದರು.
ಕಾರ್ಯಾಗಾರದಲ್ಲಿ ಡಾ.ರಾಹುಲ್ ತೋನ್ಸೆ , ವಿದ್ಯಾ ಶೆಣೈ , ಡಾನ್‌ಪ್ರಕಾಶ್,ಶ್ರೀನಿವಾಸನ್ ನಂದಗೋಪಾಲ್, ಸಚಿತಾ ನಂದಗೋಪಾಲ್ , ಪ್ರೀತಂ ಕಾಮತ್, ಸುಭಾಷ್ ಬಂಗೇರ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಇಂಡಿಯನ್ ಅಕಾಡೆಮಿ ಆಫ್ ಮಾರ್ಷಲ್ ಆರ್ಟ್ಸ್ ನಿಂದ ಆತ್ಮರಕ್ಷಣೆಯ ಬಗ್ಗೆ ತರಬೇತಿ ನೀಡಲಾಯಿತು. ಪ್ರಾದೇಶಿಕ ವಿಜ್ಞಾನ ಕೇಂದ್ರ, ತಾರಾಲಯಕ್ಕೆ ಮತ್ತು ಪಿಲಿಕುಳ ಜೈವಿಕ ಉದ್ಯಾನವನಕ್ಕೆ ವಿದ್ಯಾರ್ಥಿಗಳು ಭೇಟಿ ನೀಡಿದರು.
ರೋಟರಿಯ ಮಾಜಿ ಗವರ್ನರ್ ಕೃಷ್ಣ ಶೆಟ್ಟಿ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದರು.ಕಾರ್ಯಾಗಾರದಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಅತ್ಯುತ್ತಮ ತಂಡಕ್ಕೆ ಪ್ರಶಸ್ತಿ ನೀಡಲಾಯಿತು. ಸುದರ್ಶನ ನಾಯಕ್ ವಂದಿಸಿದರು.