

ವಿಜಯಪುರ : ರೋಟರಿ ಸಂಸ್ಥೆಯು ಆರೋಗ್ಯ, ಶೈಕ್ಷಣಿಕ, ಕ್ರೀಡಾ ಸೇರಿ ಹಲವು ಸಾಮಾಜಿಕ ಸೇವೆ ಮಾಡುತ್ತಿದ್ದು, ತನ್ನ ಸೇವಾ ಕಾರ್ಯಗಳಿಂದ ಲಾಂತರ ಜನರ ಹೃದಯ ಮುಟ್ಟಿದೆ ಎಂದು ರೋಟರಿ ಸಂಸ್ಥೆಯ ಜಿಲ್ಲೆ 3190ನ ಮಾಜಿ ಜಿಲ್ಲಾ ಪ್ರಾಂತಪಾಲ ಕೆ.ಎಸ್.ನಾಗೇಂದ್ರ ತಿಳಿಸಿದರು.
ಪಟ್ಟಣದ ಸುಬ್ಬಮ್ಮ ಚೆನ್ನಪ್ಪ ಸಮುದಾಯ ಭವನದಲ್ಲಿ ಆಯೋಜಿಸಿದ್ದ ರೋಟರಿ ಸಂಸ್ಥೆಯ ವಿಜಯಪುರ ಕ್ಲಬ್ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು. ಹಲವು ಸರ್ಕಾರಿ ಶಾಲೆ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸುವುದರ ಜತೆಗೆ 7 ಹಾಗೂ 10ನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಮೆಡಿಕಲ್ ಕಿಟ್ಗಳನ್ನು ವಿತರಿಸಲಾಯಿತು. ಸಹಾಯಕ ಪ್ರಾಂತಪಾಲ ಎಂ.ಶ್ರೀನಿವಾಸ ಅವರು ರೋಟರಿ ಕ್ಲಬ್ನ ಬುಲೆಟಿನ್ ವಿಜಯ ಪತ್ರಿಕೆ ಬಿಡುಗಡೆ ಮಾಡಿದರು. ರೋಟರಿ ಸಂಸ್ಥೆಗೆ ನೂತನ ಸದಸ್ಯರಾಗಿ ಪುರಸಭಾ ಸದಸ್ಯೆ ಶಿಲ್ಪಾ ಅಜಿತ್, ಪೂಜಾ ಪುನೀತ್, ನಂದಿನಿ ಅಶೋಕ್ ಕುಮಾರ್, ಚಂದನ್ ಸೇರ್ಪಡೆಗೊಂಡರು.
ನೂತನ ಪದಾಧಿಕಾರಿಗಳು: ಅಧ್ಯಕ್ಷರಾಗಿ ಎರಡನೆಯ ಬಾರಿಗೆ ಚ.ವಿಜಯ ಬಾಬು, ಕಾರ್ಯದರ್ಶಿಯಾಗಿ ಸಿ.ಅಶೋಕ್ ಕುಮಾರ್, ನಿಯೋಜಿತ ಅಧ್ಯಕ್ಷರಾಗಿ ಎಸ್.ಪುನೀತ್ ಕುಮಾರ್, ಕಾರ್ಯನಿರ್ವಾಹಕ ಕಾರ್ಯದರ್ಶಿಯಾಗಿ ಶೈಲೇಂದ್ರ ಕುಮಾರ್, ಖಜಾಂಚಿ ಎನ್.ಕಿರಣ್, ಸಾರ್ಜೆಂಟ್ ಅಟ್ ಆಮ್ಸ್ರ್ ವಿ.ಯತೀಶ್, ಸಂ ಸೇವೆ ನಿರ್ದೇಶಕರಾಗಿ ವಿಎಸ್.ರವಿ, ಸಮುದಾಯ ಸೇವೆ ನಿರ್ದೇಶಕ ಡಾ.ಜಿ.ಎಸ್.ಗುರುದತ್, ವೃತ್ತಿ ಸೇವೆ ನಿರ್ದೇಶಕರಾಗಿ ಎ.ಎಂ.ಮಂಜುಳಾ, ಅಂತಾರಾಷ್ಟ್ರೀಯ ಸೇವೆ ನಿರ್ದೇಶಕರಾಗಿ ಸಿ.ಸುರೇಶ್, ಯುವಜನ ಸೇವೆ ನಿರ್ದೇಶಕರಾಗಿ ಬಿ.ನರೇಂದ್ರ, ಸದಸ್ಯತ್ವ ಅಭಿಯಾನದ ನಿರ್ದೇಶಕ ಎನ್.ರುದ್ರಮೂರ್ತಿ, ಟೀಚ್ ಮಿಷನ್ ನಿರ್ದೇಶಕ ಬಿಸಿ.ಸಿದ್ದರಾಜು, ಸಾರ್ವಜನಿಕ ಚಿತ್ರಣ ನಿರ್ದೇಶಕ ಡಾ.ಜಿ.ಅಂಬರೀಶ್, ಪೋಲಿಯೋ ಪ್ಲಸ್ ಸದಸ್ಯರಾಗಿ ಎಸ್.ಬಸವರಾಜು, ಟಿಆರ್ಎ್ ನಿರ್ದೇಶಕರಾಗಿ ಸಿ.ನವೀನ್, ಬುಲೆಟಿನ್ ಸಂಪಾದಕರಾಗಿ ಬಿ.ವಿನಯ್ ನೇಮಕವಾದರು.