ರೋಟರಿ ವೃತ್ತಿಪರ ಶ್ರೇಷ್ಠತೆ ಪ್ರಶಸ್ತಿ ಪ್ರದಾನ

1 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ರೋಟರಿ ಕ್ಲಬ್​ ಆಫ್​ ಸೆವೆನ್​ ಹಿಲ್ಸ್​ ಸಹಯೋಗದಲ್ಲಿ ರೋಟರಿ ವೊಕೇಶನಲ್​ ಎಕ್ಸಲೆನ್ಸ್​ ಅವಾರ್ಡ (ರೋಟರಿ ವೃತ್ತಿಪರ ಶ್ರೇಷ್ಠತೆ ಪ್ರಶಸ್ತಿ) ಪ್ರದಾನ ಸಮಾರಂಭವು ನಗರದ ವಿಠ್ಠಲ ಆಸ್ಪತ್ರೆಯ ತೇಜ್​ ಭವನದಲ್ಲಿ ಜರುಗಿತು.

ಪತ್ರಕರ್ತರಾದ ಮಹಾಂತೇಶ ಕಣವಿ, ಶಶಿಧರ ಬುದ್ನಿ, ರವೀಶ ಪವಾರ, ರಾಜು ಕರಣಿ, ಛಾಯಾಗ್ರಾಹಕರಾದ ಶಿವಲಿಂಗಯ್ಯ ಪಾಟೀಲ, ಮೀಲಿಂದ ಪೀಸೆ, ಬಸವರಾಜ ಅಳಗವಾಡಿ ಹಾಗೂ ಸದ್ದಾಂ ಮುಲ್ಲಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮೇಜರ್​ ಸಿದ್ದಲಿಂಗಯ್ಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಮಾಧ್ಯಮ ಪ್ರಜಾಪ್ರಭುತ್ವದ 4ನೇ ಅಂಗ. ಇದಕ್ಕೆ ಸಮಾಜ, ವ್ಯವಸ್ಥೆ ಬಡಿದೆಬ್ಬಿಸವ ಶಕ್ತಿ ಇದೆ. ಸಿಎಂ, ಪಿಎಂಗೆ ನೇರವಾಗಿ ಪ್ರಶ್ನಿಸುವ ಗಟ್ಟಿತನವೂ ಪತ್ರಕರ್ತರಿಗೆ ಇದೆ. ಪ್ರಸ್ತುತ ಕೃತಕ ಬುದ್ಧಿ ಮತ್ತೆ ಹಾಗೂ ಡಿಜಿಟಲ್​ ಮಾಧ್ಯಮದ ಪ್ರಭಾವ ಹೆಚ್ಚಿದೆ. ಡಿಜಿಟಲ್​ ಮಾಧ್ಯಮದಿಂದ ಮುದ್ರಣ, ವಿದ್ಯುನ್ಮಾನ ಮಾಧ್ಯಮ ಸಂಕಷ್ಟಕ್ಕೆ ಸಿಲುಕಿದಂತಾಗಿವೆ ಎಂದು ವಿಷಾದಿಸಿದರು.

ಪತ್ರಕರ್ತ ಡಾ. ಬಸವರಾಜ ಹೊಂಗಲ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್​ ಸೆವೆನ್​ ಹಿಲ್ಸ್​ ಅಧ್ಯಕ್ಷೆ ಗೌರಿ ಮಾದನಭಾವಿ ಮಾತನಾಡಿ, ದೇಶ ಹಾಗೂ ಸಮಾಜದ ಅಭಿವೃದ್ಧಿಗೆ ಮಳೆ, ಚಳಿ, ಬಿಸಿಲು ಲೆಕ್ಕಿಸದೆ ಸದಾ ಹಗಲಿರುಳು ಶ್ರಮಿಸುವ ಪತ್ರಕರ್ತರ ಕಾರ್ಯ ಶ್ಲಾಘನೀಯ ಎಂದರು.

ಸ್ಮಿತಾ ಮಂತ್ರಿ, ರೋಟರಿ ಗವರ್ನರ್​ ಡಾ.ಪಲ್ಲವಿ ದೇಶಪಾಂಡೆ, ರಶ್ಮಿ ನಾಯಕ, ರವಿಕುಮಾರ ಕಗ್ಗಣ್ಣವರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net