ನವನಗರ ರೋಟರಿ ಶಾಲೆ ಸಾಧನೆ,  ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

IMG_20250828_210728_3-1.jpg
Published on

ಹುಬ್ಬಳ್ಳಿ: ಇಲ್ಲಿಯ ನವನಗರ ರೋಟರಿ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಚೆಸ್ ಮತ್ತು ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಪ್ರಥನ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಶಟಲ್ ಬ್ಯಾಡ್ಮಿಂಟನ್ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಬೆಳಗಾವಿ ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಟೇಬಲ್ ಟೆನ್ನಿಸ್ ನಲ್ಲಿ ಸ್ಪಂದನಾ ಬೆನ್ನೂರ, ಮನೀಶಾ ಅಮ್ಮಿನಭಾವಿ, ಸಾಚಿ ಹಿರೇಮಠ, ರಾಹಿ ತುರಮರಿ, ಭಾವನಾ ಹಾದಿಮನಿ.
ಚೆಸ್ ನಲ್ಲಿ ಸಹನಾ ರಡ್ಡೇರ, ಸೃಷ್ಟಿ ಅರಳಿಕಟ್ಟಿ, ಸಿದ್ದೇಶ ಹಿರೇಮಠ, ರತಾ ಶಾಹಪುರಕರ ಹಾಗೂ ಶಟಲ್ ಬ್ಯಾಡ್ಮಿಂಟನ್ನಲ್ಲಿ ರಿತ್ವಿಕ್ ಬಿಂಗಿ, ಅಮೋ ಪೊಲೀಸ್ ಪಾಟೀಲ, ಯಶೋಧನ ಕಬ್ಬಿನ ಅವರ ತಂಡ ಈ ಸಾಧನೆ ಮಾಡಿದೆ ಎಂದು ಪ್ರಾಚಾರ್ಯ ವಿಜಯಶ್ರೀ ಕಲಬುರ್ಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೈಹಿಕ ಶಿಕ್ಷಣ ಶಿಕ್ಷಕರಾದ ಸುಭಾಸಚಂದ್ರ ಪೂಜಾರ, ಪ್ರೇಮಲತಾ ಹೆಗಡೆ ತರಬೇತಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net