

ಹುಬ್ಬಳ್ಳಿ: ಇಲ್ಲಿಯ ನವನಗರ ರೋಟರಿ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯಲ್ಲಿ ಭಾನುವಾರ ವಿಜ್ಞಾನ, ಚಿತ್ರಕಲೆ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ನಿವೃತ್ತ ವೈದ್ಯಾಧಿಕಾರಿ ಡಾ. ವಿ.ಬಿ. ನಿಟಾಲಿ ಕಾರ್ಯಕ್ರಮ ಉದ್ಘಾಟಿಸಿದರು. ಬದುಕಿನಲ್ಲಿ ವಿಜ್ಞಾನದ ಮಹತ್ವ ಬಹಳಷ್ಟಿದೆ. ಗ್ರಂಥಾಲಯ, ಪ್ರಯೋಗಶಾಲೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಿಜ್ಞಾನ ಅಧ್ಯಯನ ಮಾಡಬೇಕು. ವಿಜ್ಞಾನದಿಂದ ವಿಚಾರ ಶಕ್ತಿ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಪ್ರಾಚಾರ್ಯ ಡಾ. ವಿಜಯಶ್ರೀ ಕಲಬುರ್ಗಿ ಅಧ್ಯಕ್ಷತೆ ವಹಿಸಿದ್ದರು.
ರೋಟರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಬಿ.ಎಸ್. ಪಾಟೀಲ, ಕಾರ್ಯದರ್ಶಿ ಡಾ. ಕೆ.ಪಿ. ಅಣ್ಣಿಗೇರಿ, ಇತರರು ಉಪಸ್ಥಿತರಿದ್ದರು.