

ಶ್ರವಣಬೆಳಗೊಳ : ಸೇವಾ ವಲಯದ ಸಂಸ್ಥೆ ರೋಟರಿ ಅಂತಾರಾಷ್ಟ್ರೀಯ ನಿಯೋಜಿತ ಅಧ್ಯಕ್ಷರಾಗಿ ( 2025-26 ನೇ ಸಾಲಿ)ೆ ಆಯ್ಕೆಯಾಗಿರುವ ಬ್ರೆಜಿಲ್ ದೇಶದ ಮಾರಿಯೋ ಸೀಸರ್ ಮಾರ್ಟಿನ್ಸ್ ಡಿ.ಕರ್ಮಾಗೊ ರವರು ಶ್ರವಣಬೆಳಗೊಳಕ್ಕೆ ಭೇಟಿ ನೀಡಿ, ವಿಂದ್ಯಗಿರಿಯ ಬಾಹುಬಲಿ ಮೂರ್ತಿಯ ದರ್ಶನ ಪಡೆದರು. ಜಿಲ್ಲೆಗೆ ಮಂಗಳವಾರ ಭೇಟಿ ನೀಡಿ, ಪ್ರೇಕ್ಷಣಿಯ ಸ್ಥಳಗಳಾದ ಬೇಲೂರು, ಹಳೇಬೀಡು ಮತ್ತು ಶ್ರವಣಬೆಳಗೊಳ ವೀಕ್ಷಣೆ ಮಾಡಿದ ಅವರು, ಇಲ್ಲಿನ ಇತಿಹಾಸ, ಪರಂಪರೆ ತಿಳಿದುಕೊಂಡರು. ಪ್ರಪಂಚದಾದ್ಯಂತ ಇರುವ ರೋಟರಿ ಸಂಸ್ಥೆಯ ಎಲ್ಲ ಸದಸ್ಯರಿಗೂ ಶುಭವಾಗಲಿ ಎಂದು ಅವರು ಬಾಹುಬಲಿ ದರ್ಶನ ಪಡೆದ ಸಂದರ್ಭ ಹಾರೈಸಿದರು. ಸಹಾಯಕ ಪ್ರಾಂತಪಾಲ ಪದ್ಮನಾಭ, ವಿಭಾಗೀಯ ಅಧ್ಯಕ್ಷ ಕಿಶೋರ್, ಕಾರ್ಯದರ್ಶಿ ಶಿವನಂಜೇಗೌಡ, ನಿಜಿಯೋಜಿತ ಪ್ರಾಂತಪಾಲ ಪಾಲಾಕ್ಷ, ಹಾಸನ ರೋಟರಿ ಕ್ಲಬ್ ಅಧ್ಯಕ್ಷ ಗಿರೀಶ್, ಸದಸ್ಯರಾದ ಮಹೇಶ್, ಹೇಮಲತಾ ಮತ್ತು ಉದ್ಯಮಿ ರವಿಶಂಕರ್ ಕೋಟೋಜಿ ಇದ್ದರು.