

ಹೆಬ್ರಿ: 30 ವರ್ಷಗಳಿಂದ ಸಂಸ್ಥೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಮಾಜಸೇವೆ ಮಾಡುತ್ತಾ ಬಂದಿದೆ. ಇನ್ನಷ್ಟು ಸೇವೆ ಮಾಡುವಂತಾಗಲಿ ಎಂದು ಉದ್ಯಮಿ ಎಚ್.ಯೋಗೀಶ್ ಭಟ್ ಶುಭ ಹಾರೈಸಿದರು.
ಹೆಬ್ರಿ ರೋಟರಿ ಗ್ರಾಮೀಣ ದಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ಧಾರ್ಮಿಕ ಮುಂದಾಳು ಎಚ್.ಭಾಸ್ಕರ ಜೋಯಿಸ್ ಉದ್ಘಾಟಿಸಿದರು. ರೊಟೆರಿಯನ್ ಶೈಲಾ ರಾವ್ ಮಣಿಪಾಲ ಪ್ರಮಾಣ ವಚನ ಬೋಧಿಸಿದರು. ಉದ್ಯಮಿ ಎಚ್.ಗುರುದಾಸ ಶೆಣೈ, ಪ್ರಮುಖರಾದ ರಾಮಕೃಷ್ಣ ಆಚಾರ್ಯ, ಅಧ್ಯಕ್ಷ ಕೃಷ್ಣರಾಜ ಕೆ. ಉಪಸ್ಥಿತರಿದ್ದರು. ನಿತ್ಯಾನಂದ ಭಟ್ ಪ್ರಾರ್ಥಿಸಿದರು. ಕಾರ್ಯದರ್ಶಿ ಪ್ರಕಾಶ್ ಭಟ್ ಸ್ವಾಗತಿಸಿದರು. ಗಣೇಶ ಹೇರಳೆ ವಂದಿಸಿದರು. ಸದಾಶಿವ ಬಾಯರಿ ನಿರೂಪಿಸಿದರು.