ರೋಟರಿ ನೇಷನ್ ಬಿಲ್ಡರ್ಸ್ ಪ್ರಶಸ್ತಿ ಪ್ರದಾನ

rotry
Published on

ಮಡಿಕೇರಿ: ಶಿಕ್ಷಣ ಮತ್ತು ಸಮುದಾಯದ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ರೋಟರಿ ಮಡಿಕೇರಿ ಸಂಸ್ಥೆಯು ಮೂವರು ಸರ್ಕಾರಿ ಶಾಲಾ ಶಿಕ್ಷಕರಿಗೆ ರೋಟರಿ ನೇಷನ್ ಬಿಲ್ಡರ್ಸ್ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ನಗರದ ರೋಟರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ ಸರ್ಕಾರಿ ಜೂನಿಯರ್ ಕಾಲೇಜ್‌ನ ಕನ್ನಡ ಶಿಕ್ಷಕಿ ಕೆ.ಬಿ.ಗೌರಿ, ಕಕ್ಕಬ್ಬೆ ಪ್ರೌಢಶಾಲೆಯ ಇಂಗ್ಲಿಷ್ ಶಿಕ್ಷಕ ಕುಟ್ಟಂಜೆಟ್ಟಿರ ಎಂ.ಶರತ್ ಹಾಗೂ ಮಾದಾಪುರದ ಡಿ.ಚೆನ್ನಮ್ಮ ಪಿಯು ಕಾಲೇಜ್‌ನ ಪ್ರಾಂಶುಪಾಲ ಸಿ.ಜಿ.ಮಂದಪ್ಪ ಅವರುಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲೆ ೩೧೮೧ ಜಿಲ್ಲಾ ಯೋಜನೆಗಳ ಅಧ್ಯಕ್ಷ ರೊಟೇರಿಯನ್ ಕೆ.ಎಸ್.ತಮ್ಮಯ್ಯ, ರೋಟರಿ ಕ್ಲಬ್ ಸೇವಾ ನಿರ್ದೇಶಕ ರೋ.ಎಂ.ಎಂ.ಕಾರ್ಯಪ್ಪ, ಕ್ಲಬ್ ಖಜಾಂಚಿ ರೋ.ಈಶ್ವರ ಭಟ್, ರೋ.ಪಿಡಿಜಿ ಡಾ.ರವಿ ಅಪ್ಪಾಜಿ, ಪಬ್ಲಿಕ್ ಇಮೇಜ್ ಮತ್ತು ಕ್ಲಬ್ ಬುಲೆಟಿನ್ ಸಂಪಾದಕ ರೋ.ಟಿ.ಎನ್.ಪ್ರಿನ್ಸ್ ಪೊನ್ನಣ್ಣ, ಕ್ಲಬ್ ವೃತ್ತಿಪರ ಸೇವಾ ನಿರ್ದೇಶಕ ರೋ.ಮನೋಹರ್ ಕಾಮತ್, ಕ್ಲಬ್ ಕಾರ್ಯದರ್ಶಿ ರೋ.ಬಿ.ಎಂ.ಸೋಮಣ್ಣ, ರೋಟರಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net