

ಹುಬ್ಬಳ್ಳಿ: ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ ಟೌನ್ ವತಿಯಿಂದ ವಿದ್ಯಾನಗರದ ತಿಮ್ಮಸಾಗರ ಗುಡಿಯ ರಸ್ತೆಯಲ್ಲಿರುವ ಭಾವಸಾರ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಮಹಿಳೆಯರಿಗೆ ಸುಮಾರು 4 ಲ ರೂ. ಮೌಲ್ಯದ 72 ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.
ಆದಿಶಕ್ತಿ ಮೋಟರ್ಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ ತಾತುಸ್ಕರ್ ಮಾತನಾಡಿ, ಮಹಿಳೆಯರು ಸ್ವಾವಲಂಬಿಯಾದರೆ ಸಮಾಜ ಉತ್ತಮ ರೀತಿಯಲ್ಲಿ ಸಾಗುತ್ತದೆ ಎಂದರು.
ಆದಿಶಕ್ತಿ ಮೋಟರ್ಸ್ ಲಿಮಿಟೆಡ್ ಚೇರ್ಮನ್ ನಾರಾಯಣ ತಾತುಸ್ಕರ್, ನಿರ್ದೇಶಕರಾದ ಜಯಶ್ರೀ ತಾತುಸ್ಕರ್, ಪ್ರತಿಕ ತಾತುಸ್ಕರ್, ಭಾವಸಾರ ವಿಷನ್ ಅಧ್ಯಕ್ಷ ಲೀಲಾಬಾಯಿ, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ ಟೌನ್ ಅಧ್ಯಕ್ಷ ದಿನೇಶ ಶೆಟ್ಟಿ, ಕಾರ್ಯದರ್ಶಿ ಪ್ರವಿಣ ಭನ್ಸಾಲಿ, ಲಿಂಗರಾಜ ಪಾಟೀಲ ಹಾಗೂ ಇತರರು ಉಪಸ್ಥಿತರಿದ್ದರು. ರಮೇಶ ದಾರಸ್ಕಾಲ್ ಕಾರ್ಯಕ್ರಮ ನಿರೂಪಿಸಿದರು.