ಭಾನುವಾರ ರೋಟರಿ ನೂತನ ಸದಸ್ಯರ ಪದಗ್ರಹಣ

08GDG02
Published on

ವಿಜಯವಾಣಿ ಸುದ್ದಿಜಾಲ ಗದಗ
ರೋಟರಿ ಕ್ಲಬ್​ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಸ್ಥಾನಕ್ಕೆ ಆಯ್ಕೆಯಾದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜು.9 ರಂದು ಉಷಾದೇವಿ ಕುಷ್ಟಗಿ ಕಮ್ಯುನಿಟಿ ಕೇರ್​ ಸೆಂಟರ್​ ನಲ್ಲಿ ಭಾನುವಾರ ಸಂಜೆ 6.30 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ನೂತನ ಅದ್ಯಕ್ಷ ಚಂದ್ರಮೌಳಿ ಜಾಲಿ ಹೇಳಿದರು.
ಪತ್ರಿಕಾ ಭವನದಲ್ಲಿ ಶನಿವಾರ ಜರುಗಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾನ್ನಿದ್ಯವನ್ನು ತೋಂಟದ ಸಿದ್ಧರಾಮ ಶ್ರೀಗಳು ವಹಿಸಲಿದ್ದಾರೆ. ರಾಜಶೇಖರ ಬಳ್ಳಾರಿ, ಚನ್ನಬಸಪ್ಪ ಗುಡಿಮನಿ ಉಪಸ್ಥಿತಿ ಇರುತ್ತಾರೆ ಎಂದರು.
ಕ್ಲಬ್​ ವತಿಯಿಂದ ಮಕ್ಕಳಿಗೆ ಶಿಕ್ಷಣ ಮತ್ತು ಆರೋಗ್ಯ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗಿದೆ. ಸ್ವಚ್ಚತೆ, ತ್ಯಾಜ್ಯ ವಿಲೇವಾರಿ, ವನಸ್ಪತಿ ಸಸ್ಯಗಳ ರಕ್ಷಣೆ, ಬಾಲ್ಕನಿ ತೋಟಗಾರಿಕೆ, ಅಂಗನವಾಡಿಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಪ್ರಸಕ್ತ ಸಾಲಿನಲ್ಲಿ ವಿವಿಧ ಶಾಲೆಗಳಿಗೆ ವಿದ್ಯಾಭ್ಯಾಸ ಪರಿಕರ, ನೋಟ್​ ಬುಕ್​ ವಿತರಿಸಲಾಗುವುದು. ಶಾಲೆಗಳಲ್ಲಿ ಸೈಬರ್​ ಅಪರಾಧ, ಭದ್ರತೆ ಕುರಿತು ತಿಳುವಳಿಕೆ ಕಾರ್ಯಕ್ರಮ, ಶಾಲಾ ಉದ್ಯಾನವನ ಅಭಿವೃದ್ಧಿಗೊಳಿಸಲಾಗುವುದು. ಸಾಧಕ ಶಾಲಾ ಶಿಕ್ಷಕರನ್ನು ಗುರುತಿಸಿ "ನೇಶನ್​ ಬಿಲ್ಡರ್​ ಅವಾರ್ಡ' ನೀಡಲಾಗುವುದು. ಯುವಕರಿಗೆ ಉದ್ಯೋಗ ಮೇಳ ಏರ್ಪಡಿಸಲಾಗುವುದು ಎಂದು ಚಂದ್ರಮೌಳಿ ತಿಳಿಸಿದರು.
ಶ್ರೀಧರ ಸುಲ್ತಾನಪುರ, ವಿಶ್ವನಾಥ ಯಳಮಲಿ, ಚನ್ನವಿರಪ್ಪ ಹುಣಸಿಕಟ್ಟಿ, ಶಿವಾಚಾರ್ಯ ಹೊಸಳ್ಳಿಮಠ, ಅಕ್ಷಯ ಶೆಟ್ಟಿ ಬಾಲಕೃಷ್ಣ ಕಾಮತ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net