

ಮಡಿಕೇರಿ: ರೋಟರಿ ಮಡಿಕೇರಿ ವತಿಯಿಂದ ನಗರದ ರೋಟರಿ ಸಭಾಂಗಣದಲ್ಲಿ ಉಚಿತ ಅಕ್ಯುಪ್ರೆಶರ್ ಶಿಬಿರಕ್ಕೆ ಚಾಲನೆ ದೊರೆಯಿತು.
ರೋಟರಿ ಮಡಿಕೇರಿ ಅಧ್ಯಕ್ಷ ಕೆ.ಸಿ.ಕಾರ್ಯಪ್ಪರವರು ಶಿಬಿರವನ್ನು ಉದ್ಘಾಟಿಸಿದರು. ನ.೨೫ ರವರೆಗೆ ನಡೆಯುವ ಶಿಬಿರದಲ್ಲಿ ಬೆನ್ನು ನೋವು, ಕೀಲು ನೋವು ಸೇರಿದಂತೆ ಹಲವು ರೋಗಗಳಿಗೆ ಚಿಕಿತ್ಸೆ ನೀಡಲಾಗುವುದು. ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ರೋಟರಿಯನ್ ರತನ್ ತಮ್ಮಯ್ಯ ಉಪಸ್ಥಿತರಿದ್ದರು. ಕಾರ್ಯದರ್ಶಿ ಸುದಯ್ ನಾಣಯ್ಯ, ಸಮಾಜ ಸೇವಾ ನಿರ್ದೇಶಕ ಅನಿಲ್ ಕೃಷ್ಣಾನಿ, ರೋಟರಿಯನ್ ಮಲ್ಲಿಗೆ ಪೈ, ಕುಲಪತಿ ಲಲಿತಾ ರಾಘವನ್ ಉಪಸ್ಥಿತರಿದ್ದರು. ಅಕ್ಯುಪ್ರೆಶರ್ ಶಿಬಿರವನ್ನು ರಾಜಸ್ಥಾನದ ಆರ್.ಕೆ.ಶರ್ಮಾ ನಡೆಸಿಕೊಡುತ್ತಿದ್ದಾರೆ.