

ಕಾಸರಗೋಡು: ರೋಟರಿ ಕಾಸರಗೋಡು ಮಿಡ್‌ಟೌನ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ರೋಟರಿ ಭವನದಲ್ಲಿ ಇತ್ತೀಚೆಗೆ ಜರುಗಿತು.
ಜಿಲ್ಲಾ ಗವರ್ನರ್ ಡಾ.ಸಂತೋಷ್ ಶ್ರೀಧರ್ ಕಾರ್ಯಕ್ರಮ ಉದ್ಘಾಟಿಸಿದರು. ಕಾಸರಗೋಡು ರೋಟರಿ ಅಧ್ಯಕ್ಷ ಡಾ.ಬಿ.ನಾರಾಯಣ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷರಾಗಿ ಆಯ್ಕೆಯಾದ ಗಂಗಾಧರನ್ ಪಿ.ವಿ., ಕಾರ್ಯದರ್ಶಿ ಅರ್ಜುನನ್ ತಾಯಲಂಗಡಿ ಪ್ರಮಾಣ ವಚನ ಸ್ವೀಕರಿಸಿದರು. ನಿಕಟಪೂರ್ವ ಜಿಲ್ಲಾ ಗವರ್ನರ್ ಶ್ರೀಧರನ್ ನಂಬಿಯಾರ್ ಮುಖ್ಯ ಅತಿಥಿಯಾಗಿದ್ದರು.
ವಲಯ ಸಂಯೋಜಕ ಎಂ.ಕೆ.ರಾಧಾಕೃಷ್ಣನ್, ಸಹಾಯಕ ಗವರ್ನರ್ ಹರೀಶ್ ವಿ.ವಿ., ಜಿಜಿಆರ್ ಡಾ.ಜನಾರ್ದನ ನಾಯ್ಕ, ನಿಹಾಲ್‌ಜೋಯ್, ಡಾ.ಸುಧಾ ಸಂತೋಷ್, ದಿನೇಶ್ ಎಂ.ಟಿ., ವಕೀಲ ಬೆನ್ನಿ ಜೋಸ್, ಕಾಸರಗೋಡು ಮಿಡ್ ಟೌನ್ ಅಧ್ಯಕ್ಷ ಗಂಗಾಧರನ್ ಪಿ.ವಿ., ಕಾರ್ಯದರ್ಶಿ ಅರ್ಜುನನ್ ತಾಯಲಂಗಡಿ, ಕಾರ್ಯದರ್ಶಿ ಹರಿಪ್ರಸಾದ್ ಉಪಸ್ಥಿತರಿದ್ದರು.