ಮೇ 18 ರಂದು ರೋಟರಿ ಜಿ 20 ಯೋಗ ಶೃಂಗಸಭೆ

Yoga
Published on


ಮೈಸೂರು:
ರೋಟರಿ ಜಿಲ್ಲೆ 3181ರ ವತಿಯಿಂದ ಮೇ 18 ರಂದು ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ರೋಟರಿ ಜಿ 20 ಯೋಗ ಶೃಂಗಸಭೆ ಆಯೋಜಿಸಲಾಗಿದೆ ಎಂದು ಯೋಗ ಸಮಿತಿ ಅಧ್ಯಕ್ಷ ರಂಗರಾವ್ ಕೃಷ್ಣ ತಿಳಿಸಿದರು.

ಅಂದು ಬೆಳಗ್ಗೆ 9.30ಕ್ಕೆ ಶೃಂಗಸಭೆ ಆರಂಭವಾಗಲಿದೆ. ಪದ್ಮಶ್ರೀ ಡಾ. ನಾಗೇಂದ್ರ, ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜಿ 20 ಕೌಂಟಿ ಸಹಕಾರಿ ಅಲೆಸ್ಸಾಂಡ್ರಾ, ಶೆರ್ಪಾ, ಕೆ.ಪಿ. ನಾಗೇಶ್, ಅರಳು ಮಲ್ಲಿಗೆ ಪಾರ್ಥಸಾರಥಿ ಭಾಗವಹಿಸಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಶೃಂಗಸಭೆಯ ಉದ್ದೇಶ ಜಿ 20 ಯ ಎಲ್ಲ ದೇಶಗಳಲ್ಲಿ ಯೋಗವನ್ನು ಜನಪ್ರಿಯಗೊಳಿಸುವುದು, ಆರೋಗ್ಯ ಪ್ರವಾಸೋದ್ಯಮ ಉತ್ತೇಜನ, ಯೋಗ ಮತ್ತು ಪ್ರವಾಸೋದ್ಯಮ ಪ್ರಚಾರ ಮಾಡಲು ಕ್ರಮ, ತಜ್ಞರಿಂದ ಸಂಶೋಧನಾ ಪ್ರಬಂದ, ಮೈಸೂರಿಗೆ ಜಿ 20 ರಾಷ್ಟ್ರಗಳಿಂದ ಯೋಗಾಸಕ್ತರು ಭೇಟಿ ನೀಡಲು ಉತ್ತೇಜನ ಮೊದಲಾದವು ಸೇರಿವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net