ರೋಟರಿ ಜಿ20 ಯೋಗ ಶೃಂಗಸಭೆ

2
Published on

ಮೈಸೂರು: ಯೋಗ ಕಲೆಯು ಭಾರತದ ಪ್ರಾಚೀನ ಆರೋಗ್ಯ ಸಂರಕ್ಷಣೆಯ ನೈಸರ್ಗಿಕ ಸಂಜೀವಿನಿಯಾಗಿದೆ. ಮನುಕುಲದ ಉದ್ಧಾರಕ್ಕಾಗಿ ಋಷಿ ಮುನಿಗಳು ಯೋಗವನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಆದಿ ಚುಂಚನಗಿರಿ ಶಾಖಾ ಮಠದ ಶ್ರೀ ಸೋಮನಾಥನಂದ ಸ್ವಾಮೀಜಿ ಹೇಳಿದರು.

ರೋಟರಿ ಜಿಲ್ಲೆ 3181ರ ವತಿಯಿಂದ ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಶನಿವಾರ ಆಯೋಜಿಸಿದ್ದ ರೋಟರಿ ಜಿ20 ಯೋಗ ಶೃಂಗಸಭೆಯಲ್ಲಿ ಮಾತನಾಡಿದರು.

ಯೋಗವೆಂಬುದು ವಿಶ್ವಕ್ಕೆ ಭಾರತದ ಋಷಿ-ಮುನಿಗಳು ನೀಡಿದ ಅಮೋಘ ಕೊಡುಗೆ. ಯೋಗದ ಪ್ರಾಚೀನತೆ ಅಮೋಘವಾಗಿದೆ. ಆಧುನಿಕ ದಿನಮಾನದ ಮಾಂತ್ರಿಕ ಸಾಧನವಾಗಿ ಭಾರತದ ಯೋಗವಿಂದು ವಿಶ್ವದ ಬಹುತೇಕ ಎಲ್ಲ ದೇಶಗಳ ಜನರ ಮನ್ನಣೆ ಪಡೆದಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮುಖ ಕಾರಣರಾಗಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net