ರೋಟರಿ ಕುಟುಂಬ ಸಮ್ಮಿಲನ

rotary
Published on

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಕುಟುಂಬ ಸಮ್ಮಿಲನ ಕಾರ್ಯಕ್ರಮ ಮಂಗಳವಾರ ನಡೆಯಿತು. ರೋಟರಿ ಅಧ್ಯಕ್ಷ ಚಂದ್ರಶೇಖರ ನಾಯರ್ ಅಧ್ಯಕ್ಷತೆ ವಹಿಸಿದ್ದರು. ಅ.20 ಮತ್ತು 27ರಂದು ಜರುಗುವ ರೋಟರಿ ಜಿಲ್ಲೆ 3181ರ ಸಾಂಸ್ಕೃತಿಕ ಸ್ಪರ್ಧ ಕಾರ್ಯಕ್ರಮದ ರೂಪುರೇಷೆ ರಚಿಸಲಾಯಿತು. ವಿವಿಧ ಮನೋರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.

ರೋಟರಿ ಜಿಲ್ಲಾ ಪೂರ್ವ ಸಹಾಯಕ ಗವರ್ನರ್ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಆಸ್ಕರ್ ಆನಂದ್ ಸಮಾಜ ಸೇವೆಯೊಂದಿಗೆ ಪ್ರತಿಭೆಗಳನ್ನು ಗುರುತಿಸುವ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ಸಾಂಸ್ಕೃತಿಕ ಸಹಾಯಕ ಕಾರ್ಯದರ್ಶಿ ಸತೀಶ್ ಕುಮಾರ್, ವಲಯ ಸೇನಾನಿ ವಿಶ್ವನಾಥ ನಡುತೋಟ, ರೋಟರಿ ಪೂರ್ವಾಧ್ಯಕ್ಷರಾದ ಗೋಪಾಲ ಎಣ್ಣೆಮಜಲ್, ಬಾಲಕೃಷ್ಣ ಪೈ, ನಿಕಟಪೂರ್ವಾಧ್ಯಕ್ಷ ಪ್ರಶಾಂತ್ ಕೋಡಿಬೈಲು, ಉಪ ಕಾರ್ಯದರ್ಶಿ ಭವಾನಿ ಶಂಕರ ಪೈಲಾಜೆ, ಪೂರ್ವಾಧ್ಯಕ್ಷರು, ರೋಟರಿ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net