ರೋಟರಿ ಎಲೈಟ್ ಸೇವಾ ಕಾರ್ಯ ಪ್ರಶಂಸನೀಯ

rotary elite
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಎಲೈಟ್​ನ ಸಮಾಜ ಸೇವಾ ಕಾರ್ಯಗಳು ಪ್ರಶಂಸನೀಯ ಹಾಗೂ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿವೆ. ಈ ಕ್ಲಬ್​ನ ಸಮಾಜಮುಖಿ ಕಾರ್ಯಗಳು ಹೆಚ್ಚು ಹೆಚ್ಚಾಗಿ ನಡೆಯಲಿ ಎಂದು ಸ್ವರ್ಣಾ ಗ್ರೂಪ್ ಆಫ್ ಕಂಪನೀಸ್​ನ ಎಂಡಿ ಡಾ.ವಿ.ಎಸ್.ವಿ. ಪ್ರಸಾದ ಹೇಳಿದರು.

ನಗರದ ವರಹಾ ರೆಸಿಡೆನ್ಸಿಯಲ್ಲಿ ಆಯೋಜಿಸಿದ್ದ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಎಲೈಟ್​ನ ನೂತನ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ಲಬ್ ಜಿಲ್ಲೆಯ ವಿವಿಧೆಡೆ ನಿರ್ಲಕ್ಷಿತ ಹಾಗೂ ಆರ್ಥಿಕ ಮತ್ತು ಸಾಮಾಜಿಕವಾಗಿ ತೀರ ಹಿಂದುಳಿದ ವ್ಯಕ್ತಿಗಳು, ಕ್ಷೇತ್ರಗಳನ್ನು ಗುರುತಿಸಿ ಉಪಯುಕ್ತವಾದ ಸೇವಾ ಕಾರ್ಯಗಳನ್ನು ಮಾಡುತ್ತ ಬಂದಿದೆ ಎಂದು ಪ್ರಶಂಸಿಸಿದರು.

ಸ್ವರ್ಣಾ ಗ್ರೂಪ್ ಆಫ್ ಕಂಪನೀಸ್​ನಿಂದ ದೇಣಿಗೆಯಾಗಿ ನೀಡಿದ 6 ಹೊಲಿಗೆ ಯಂತ್ರಗಳನ್ನು ಬಡ ಮಹಿಳೆಯರಿಗೆ ವಿತರಿಸಲಾಯಿತು.

ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಎಲೈಟ್​ನ 2024-25ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ರಿತು ಸರಾಫ್, ಕಾರ್ಯದರ್ಶಿಯಾಗಿ ರವಿ ಮೂಲಿಮನಿ ಹಾಗೂ ಖಜಾಂಚಿಯಾಗಿ ಅಮಿತ ಸರಾಫ್ ಅಧಿಕಾರ ಸ್ವೀಕರಿಸಿದರು. ಪಿಡಿಜಿ ಡಾ. ಪ್ರಾಣೇಶ ಜಹಗೀರದಾರ ಪ್ರತಿಜ್ಞಾ ವಿಧಿ ಬೋಧಿಸಿದರು. ದೀಪಕ ಪಾಟೀಲ, ಶಂಕರ ಹಿರೇಮಠ, ಅನೀಶ ಖೋಜೆ, ವೀರು ಉಪ್ಪಿನ, ಅವಿನಾಶ ಕುರ್ತಕೊಟಿ, ಅರು ಗೌತಮಿ, ದೇವಕಿ ಜಿ, ಡಾ.ಎಚ್.ವಿ.ಬೆಳಗಲಿ, ಶರತ ಜಾಧವ, ಬಿನಿತಾ ಮೂಲಿಮನಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net