ರೋಟರಿ ಚಿತಾಗಾರ ಘಟಕ ಲೋಕಾರ್ಪಣೆಗೆ 21ಕ್ಕೆ

19kdr1 (1)
Published on

ಕಡೂರು: ವ್ಯಕ್ತಿಯ ಮರಣದ ನಂತರ ಶವವನ್ನು ಸಕಲಗೌರವದೊಂದಿಗೆ ಅಂತ್ಯಸಂಸ್ಕಾರ ನಡೆಸಲು ರೋಟರಿ ಮತ್ತು ಪುರಸಭೆ ಸಹಬಾಗಿತ್ವದಲ್ಲಿ ನಿರ್ಮಾಣಗೊಂಡಿರುವ ರೋಟರಿ ಅನಿಲ ಚಿತಾಗಾರ ಘಟಕ ಏ.21ಕ್ಕೆ ಲೋಕಾರ್ಪಣೆಗೆ ಸಿದ್ದಗೊಂಡಿದೆ.

ಚಂದ್ರಮೌಳೇಶ್ವರ ಸ್ವಾಮಿ ದೇವಾಲಯ ಸಮೀಪದ ಹಿಂದು ರುದ್ರಭೂಮಿಯಲ್ಲಿ 2024ನೇ ಸಾಲಿನ ೆ.16ರಂದು ಅನಿಲ ಚಿತಾಗಾರ ಘಟಕ ನಿರ್ಮಾಣಕ್ಕೆ ರೋಟರಿ ಕ್ಲಬ್‌ನಿಂದ ಶಂಕುಸ್ಥಾಪನೆ ಗೊಂಡು ಶಾಸಕರು, ಮಾಜಿ ಶಾಸಕರು, ಪುರಸಭೆ ಹಾಗೂ ದಾನಿಗಳ ನೆರವಿನಿಂದ ಇಂದು ಸುಸಜ್ಜಿತ ವ್ಯವಸ್ಥೆಯೊಂದಿಗೆ ಜಿಲ್ಲೆಯಲ್ಲಿಯೇ ಉತ್ತಮ ಗುಣಮಟ್ಟದ ಪ್ರಪ್ರಥಮ ಅನಿಲ ಚಿತಗಾರ ಘಟಕ ಸ್ಥಾಪನೆಗೊಂಡಿದೆ.

ಆರಂಭಿಕವಾಗಿ ಸುಮಾರು 65 ಲಕ್ಷ ವೆಚ್ಚದ ಯೋಜನೆ ರೂಪಿಸಿಕೊಂಡು ಅನಿಲ ಚಿತಗಾರ ನಿರ್ಮಾಣಕ್ಕೆ ಒತ್ತುನೀಡಲಾಗಿತ್ತು. ಆದರೆ ಪಟ್ಟಣದ ಪ್ರತಿಯೊಂದು ಸಮುದಾಯಗಳು ಹಾಗೂ ಸಂಘ, ಸಂಸ್ಥೆಗಳು, ಸ್ಥಳೀಯ ದಾನಿಗಳು, ಅಮೆರಿಕಾದಲ್ಲಿರುವ ಕನ್ನಡಿಗರು ಕೈ ಜೋಡಿಸಿದ್ದರಿಂದ 1 ಕೋಟಿ ವೆಚ್ಚದಲ್ಲಿ ಅನಿಲ ಚಿತಗಾರದ ಜತೆ ಇತರೆ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಪುರಸಭೆಯಿಂದ ರುದ್ರಭೂಮಿಯಲ್ಲಿ 45 ಲಕ್ಷ ರೂ ವೆಚ್ಚದಲ್ಲಿ ಸಿಸಿ ರಸ್ತೆ, ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಶೆಡ್‌ಗಳ ನಿರ್ಮಾಣ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net