ರೋಟರಿ ಕ್ಲಬ್ ಪದಗ್ರಹಣ

Published on

ಹುಬ್ಬಳ್ಳಿ: ಇಲ್ಲಿಯ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ವೆಸ್ಟ್ ಪದಗ್ರಹಣ ಸಮಾರಂಭವು ಜುಲೈ 12ರಂದು ಸಂಜೆ 6ಕ್ಕೆ ನಗರದ ಕ್ಲಬ್ ರಸ್ತೆಯಲ್ಲಿರುವ ಜಿಮಖಾನಾ ಕ್ಲಬ್ ನಲ್ಲಿ ಜರುಗಲಿದೆ.

ಅಧ್ಯಕ್ಷರಾಗಿ ರವೀಂದ್ರನಾಥ ಶಿಗ್ಗಾಂವಕರ, ಕಾರ್ಯದರ್ಶಿಯಾಗಿ ದೀಪಕ ಶೆಟ್ಟಿ, ಖಜಾಂಚಿಯಾಗಿ ಉಳವಪ್ಪ ಸುಣಗಾರ ಅಧಿಕಾರ ವಹಿಸಿಕೊಳ್ಳುವರು.

ಜಿಲ್ಲಾ ಗವರ್ನರ್ ಡಾ. ಲೆನ್ನಿ ಡಾ ಕೋಸ್ಟಾ ಅವರು ಪದಗ್ರಹಣ ನೆರವೇರಿಸಿಕೊಡುವರು. ಎಜಿ ಸಂಜನಾ ಮಹೇಶ್ವರಿ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net