ರೋಟರಿ ಕ್ಲಬ್ ಸುವರ್ಣ ಮಹೋತ್ಸವ 28ರಿಂದ

3
ಚಿಕ್ಕೋಡಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಶಿವಮೂರ್ತಿ ಪಡಲಾಳೆ ಮಾತನಾಡಿದರು. ಶಿರೀಷ ಮೆಹ್ತಾ, ವಿಜಯ ಮಾಂಜರೇಕರ, ಮಹೇಶ ನೇರ್ಲಿ ಇತರರು ಇದ್ದರು.
Published on

ಚಿಕ್ಕೋಡಿ: ಇಲ್ಲಿನ ರೋಟರಿ ಕ್ಲಬ್ ಸಂಸ್ಥೆಯ ಸುವರ್ಣ ಮಹೋತ್ಸವ ಹಾಗೂ ರೋಟರಿ ವ್ಯಾಪಾರ ಮೇಳ ಜೂ.28, 29, 30 ರಂದು ಹಮ್ಮಿಕೊಳ್ಳಲಾಗಿದೆ
ಎಂದು ರೋಟರಿ ಕ್ಲಬ್ ಅಧ್ಯಕ್ಷ ಶಿವಮೂರ್ತಿ ಪಡಲಾಳೆ ಹೇಳಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೋಟರಿ ಕ್ಲಬ್ ಸುವರ್ಣ ಮಹೋತ್ಸವ ನಿಮಿತ್ತ ಜೂ.28ರಂದು ಸಂಜೆ 4.30ಕ್ಕೆ ಆರ್‌ಡಿ ಕಾಲೇಜು ಮೈದಾನದಲ್ಲಿ ವಾಣಿಜ್ಯ ಮೇಳ ಉದ್ಘಾಟನೆ. ಸಂಜೆ 6 ಗಂಟೆಗೆ ಪಟ್ಟಣದ ಕೇಶವ ಕಲಾ ಭವನದಲ್ಲಿ ಸುವರ್ಣ ಮಹೋತ್ಸವ ಆಚರಣೆ ಕಾರ್ಯಕ್ರಮ ಜರುಗಲಿದೆ. 1974ರಲ್ಲಿ ಚಿಕ್ಕೋಡಿ ಪಟ್ಟಣದಲ್ಲಿ ಆರಂಭವಾದ ರೋಟರಿ ಕ್ಲಬ್ ಪ್ರಸ್ತುತ 77 ಸದಸ್ಯರನ್ನು ಒಳಗೊಂಡಿದೆ ಎಂದರು.

ಕ್ಲಬ್ ಕಾರ್ಯದರ್ಶಿ ಶಿರೀಷ್ ಮೆಹ್ತಾ, ಮಹೋತ್ಸವದ ಅಧ್ಯಕ್ಷ ವಿಜಯ ಮಾಂಜರೇಕರ, ಕಾರ್ಯಕ್ರಮಾಧ್ಯಕ್ಷ ಮಹೇಶ ನೇರ್ಲಿ, ಸಹಾಯಕ ಗವರ್ನರ್ ಮಕರಂದ ಕುಲಕರ್ಣಿ, ಖಜಾಂಚಿ ದರ್ಶನ ಉಪಾಧ್ಯ, ರಾಜ ಜಾಧವ, ರಾಜೇಂದ್ರ ಪಾಟೀಲ, ಮಂಜುನಾಥ ದುಂಬಾಳ, ರಾಜು ಗೊಂಡೆ, ಶ್ರೀಧರ ಗಜನ್ನವರ, ಅಭಯ ಗೌರಜ, ಅಶೋಕ ಪಾಠಕ, ರಾಜು ಪಾಠಕ, ರಾಜೇಶ್ವರಿ ಕುಲಕರ್ಣಿ, ಪ್ರತಿಮಾ ಮಹಾಜನ, ವೇದಾ ಜಾಧವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net