ಸಮಾಜಮುಖಿ ಚಟುವಟಿಕೆ ಮಾದರಿ : ಕೇಶವ ಎಚ್.ಆರ್. ಅಭಿಪ್ರಾಯ

New Project (17)
Published on

ಬಂಟ್ವಾಳ: 8 ವರ್ಷಗಳ ಕನಿಷ್ಠ ಅವಧಿಯಲ್ಲಿ ಗರಿಷ್ಠ ಸಮಾಜಮುಖಿ ಚಟುವಟಿಕೆ ಮತ್ತು ದೇಣಿಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗಿ ಲೋರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಬೆಳೆದು ನಿಂತಿದೆ ಎಂದು ರೋಟರಿ ಮಾಜಿ ಜಿಲ್ಲಾ ಗವರ್ನರ್ ಕೇಶವ ಎಚ್.ಆರ್. ಹೇಳಿದರು.

ಬಂಟ್ವಾಳ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಭಾನುವಾರ ಪದಗ್ರಹಣ ಮತ್ತು ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 625 ಅಂಕ ಗಳಿಸಿದ ವಿದ್ಯಾರ್ಥಿನಿ ಸಾನಿಧ್ಯ ರಾವ್ ಸಹಿತ ವಿವಿಧ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, ವಿವಿಧ ಶಾಲೆಗಳಿಗೆ ಆರ್ಥಿಕ ನೆರವು ಹಸ್ತಾಂತರಿಸಲಾಯಿತು. ಸಹಾಯಕ ಗರ್ವನರ್ ಸಿಎ ಉಮೇಶ್ ರಾವ್ ಮಿಜಾರು, ವಲಯ ಸೇನಾನಿ ರಾಮಚಂದ್ರ ಶೆಟ್ಟಿಗಾರ್, ಕ್ಲಬ್‌ನ ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್, ನೂತನ ಅಧ್ಯಕ್ಷ ವಿಜಯ ಫರ್ನಾಂಡಿಸ್ ಮಾತನಾಡಿದರು.

ನಿಕಟಪೂರ್ವ ಕಾರ್ಯದರ್ಶಿ ರಾಜೇಶ್ ಶೆಟ್ಟಿ ಸೀತಾಳ, ನೂತನ ಕೋಶಾಧಿಕಾರಿ ಅರುಣ್ ಮಾಡ್ತ, ಮಾಜಿ ಸಹಾಯಕ ಗವರ್ನರ್ ರಾವೇಂದ್ರ ಭಟ್, ಮಾಜಿ ಅಧ್ಯಕ್ಷರಾದ ಶ್ರುತಿ ಮಾಡ್ತ, ಎಂ.ಪದ್ಮರಾಜ್ ಬಲ್ಲಾಳ್ ಮತ್ತಿತರರಿದ್ದರು. ನಿಕಟಪೂರ್ವ ಅಧ್ಯಕ್ಷ ಸುರೇಶ್ ಶೆಟ್ಟಿ ಸಿದ್ದಕಟ್ಟೆ ಸ್ವಾಗತಿಸಿದರು. ಸದಸ್ಯರಾದ ನೆಲ್ಸನ್ ಮೋನಿಸ್ ಮತ್ತು ಕೆ.ರಮೇಶ್ ನಾಯಕ್ ರಾಯಿ ನಿರೂಪಿಸಿದರು. ನೂತನ ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ರಾಯಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net